1211
ಕಕಕಕಕಕಕ ಕಕಕಕ ಕಕಕಕಕ ಕಕಕಕಕಕಕಕಕಕ ಕಕಕಕಕಕಕ - 141 ಕಕಕಕಕ ಕಕಕಕಕಕಕಕಕಕಕ - 55 ಕಕಕಕಕಕ ಕಕಕಕಕಕಕಕ ಕಕ. ಕಕಕಕಕಕಕ ಕಕಕಕಕಕಕಕ ಕಕಕಕಕಕಕಕಕಕಕಕಕಕ ಕಕಕ ಕಕಕಕಕಕ ಕಕಕಕಕಕಕಕಕಕ ಕಕಕಕಕಕಕ ಕಕಕಕಕ ಕಕಕಕಕಕಕಕ ಕಕಕಕ ಕಕಕಕಕಕಕಕಕಕ ಕಕಕಕಕಕ ಕಕಕಕಕಕಕ ಕಕಕಕ ಕಕಕಕಕ ಕಕಕಕಕಕಕಕಕ ಕಕಕಕಕಕಕಕ, ಕಕಕಕಕಕಕಕಕಕ ಕಕಕಕಕಕಕಕ ಕಕಕಕಕಕಕಕಕಕಕಕಕ ಕಕಕಕಕ ಕಕಕಕಕಕ, ಕಕಕಕಕಕಕಕಕಕಕಕ,ಕಕಕಕಕಕಕಕ - 560 056 SARAHADDUGALILLADA SANTA; (Kannada translation of the anthology of reminiscences relating to Swami Ranganathananda entitled The Monk without Frontiers, edited by Swaraj Mazumdar; Kannada translation by various scholars; Editor-in-Chief of the Kannada edition : Dr. Pradhan Gurudatta; Published by Sri P. Narayana Swamy, Registrar, Kuvempu Bhasha Bharathi Pradhikara; Kalagrama, Jnana Bharathi, Behind Bangalore University Campus, Mallattahalli, Bangalore - 560 056 ; 2013 ; Pp. xx + 612 (Including Photographs of 16 pages.); Price : Rs. 250/- Published with the kind permission of Swami Ranganathananda Birth Certenary Celebration Commitiee, HA 244, Sector III, Salt Lake, Kolkata-700097 ಕಕಕಕಕ ಕಕಕಕಕಕಕಕ ಕಕಕಕಕಕಕಕ: ಕಕಕಕಕಕಕ ಕಕಕಕ ಕಕಕಕಕ ಕಕಕಕಕಕಕಕಕ, ಕಕಕಕಕಕಕಕ-560056

ಸರಹದ್ದುಗಳಿಲ್ಲದ ಸಂತ - Kanajakanaja.in › ebook › images › Text › 590.docx · Web view2.ಮ ನ ನಡ ಗ ಗ ಹ ನ ನ ಟ : ಸ ವ ಮ

  • Upload
    others

  • View
    12

  • Download
    2

Embed Size (px)

Citation preview

ಸರಹದ್ದುಗಳಿಲ್ಲದ ಸಂತ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಕಟಣೆ - 141

ವಿಚಾರ ಸಾಹಿತ್ಯಮಾಲೆ - 55

ಪ್ರಧಾನ ಸಂಪಾದಕರು

ಡಾ. ಪ್ರಧಾನ್ ಗುರುದತ್ತ

ಸರಹದ್ದುಗಳಿಲ್ಲದ ಸಂತ

ಸ್ವಾಮಿ ರಂಗನಾಥಾನಂದ ಅವರನ್ನು ಕುರಿತ ನೆನಪುಗಳು

ಜನ್ಮ ಶತಮಾನೋತ್ಸವ ಕಾಣಿಕೆ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಜ್ಞಾನಭಾರತಿ

ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ,

ಮಲ್ಲತ್ತಹಳ್ಳಿ,ಬೆಂಗಳೂರು - 560 056

SARAHADDUGALILLADA SANTA; (Kannada translation of the anthology of reminiscences relating to Swami Ranganathananda entitled The Monk without Frontiers, edited by Swaraj Mazumdar; Kannada translation by various scholars; Editor-in-Chief of the Kannada edition : Dr. Pradhan Gurudatta; Published by Sri P. Narayana Swamy, Registrar, Kuvempu Bhasha Bharathi Pradhikara; Kalagrama, Jnana Bharathi, Behind Bangalore University Campus, Mallattahalli, Bangalore - 560 056 ; 2013 ; Pp. xx + 612 (Including Photographs of 16 pages.); Price : Rs. 250/- Published with the kind permission of Swami Ranganathananda Birth Certenary Celebration Commitiee, HA 244, Sector III, Salt Lake, Kolkata-700097

ಕನ್ನಡ ಆವೃತ್ತಿಯ ಹಕ್ಕುಗಳು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು-560056

ಪ್ರಥಮ ಮುದ್ರಣ : 2013

ಪುಟಗಳು: xx + 612 (ಚಿತ್ರಸಂಪುಟದ 16 ಪುಟಗಳು ಸೇರಿ)

ಬೆಲೆ: ರೂ. 250/-

ಪ್ರಕಾಶಕರು :

ಪಿ. ನಾರಾಯಣಸ್ವಾಮಿ

ರಿಜಿಸ್ಟ್ರಾರ್

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಜ್ಞಾನಭಾರತಿ

ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ

ಮಲ್ಲತ್ತಹಳ್ಳಿ, ಬೆಂಗಳೂರು - 560 056

ಮುಖಪುಟ ವಿನ್ಯಾಸ ಮತ್ತು ಚಿತ್ರ : ಶ್ರೀ ವಿಶ್ವನಾಥ್ ಶೆಟ್ಟಿಗಾರ್

ISBN : 978-81-921758-2-9

ಮುದ್ರಕರು :

ಮೆ|| ಮಯೂರ ಪ್ರಿಂಟ್ ಆಡ್ಸ್

ನಂ. 69, ಸುಭೇದಾರ್ ಛತ್ರಂ ರೋಡ್

ಬೆಂಗಳೂರು - 560020. ದೂ : 23342724

ಕರ್ನಾಟಕ ಸರ್ಕಾರ

ಜಗದೀಶ್ ಶೆಟ್ಟರ್ ವಿಧಾನಸೌಧ

ಮುಖ್ಯ ಮಂತ್ರಿ ಬೆಂಗಳೂರು - 560 001

ಮೊದಲ ಮಾತು

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನಿರಂತರವಾಗಿ ಉಪಯುಕ್ತ ಪುಸ್ತಕಗಳ ಪ್ರಕಟಣೆಯೂ ಸೇರಿದಂತೆ ಕನ್ನಡ ನಾಡು ಹಾಗೂ ನುಡಿಯ ವಿಕಾಸಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿ.

ರಾಷ್ಟ್ರಕವಿ ಕುವೆಂಪುರವರ ಹೆಸರಿನಲ್ಲಿರುವ ಭಾಷಾ ಭಾರತಿ ಪ್ರಾಧಿಕಾರ ತನ್ನ ಹೆಸರನ್ನು ಅನ್ವರ್ಥ ಮಾಡಿಕೊಳ್ಳುವ ರೀತಿಯಲ್ಲಿ ಕ್ರಿಯಾಶೀಲವಾಗಿರುವುದು ಶ್ಲಾಘನೀಯ. ವಿಲ್ ಡ್ಯೂರಾಂಟ್ರವರ ``ನಾಗರಿಕತೆಯ ಇತಿಹಾಸ'', ಜೆ.ಡಿ. ಬರ್ನಾಲ್ರವರ ``ಇತಿಹಾಸದಲ್ಲಿ ವಿಜ್ಞಾನ'' ಮುಂತಾದ ಸಂಪುಟಗಳ ಕನ್ನಡ ಅನುವಾದ, ಡಾ. ಬಿ.ಆರ್. ಅಂಬೇಡ್ಕರ್ರವರ ಕೃತಿಗಳ ಪರಿಷ್ಕೃತ ಆವೃತ್ತಿಗಳ ಪ್ರಕಟಣೆ, ಭಾರತೀಯ ವಿದ್ಯಾಭವನದ ಸಹಯೋಗದೊಂದಿಗೆ ಹಲವಾರು ಗ್ರಂಥಗಳ, ವೈದ್ಯವಿಜ್ಞಾನ, ವಿಜ್ಞಾನ ತಂತ್ರಜ್ಞಾನಗಳಿಗೆ ಸಂಬಂಧಪಟ್ಟಂತಹ ಬಹುಕ್ಷೇತ್ರಗಳ ಉಪಯುಕ್ತ ಪ್ರಕಟಣೆಗಳ ಹಾಗೂ ಇತರ ಅಗತ್ಯ ಚಟುವಟಿಕೆಗಳ ಮೂಲಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವ್ಯಕ್ತಪಡಿಸಿರುವ ಬದ್ಧತೆ ಶ್ಲಾಘನೀಯ.

ಕನ್ನಡ ನಾಡಿನ ಜನತೆ ಪ್ರಾಧಿಕಾರದ ಚಟಿವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಲಿ ಹಾಗೂ ಪ್ರಾಧಿಕಾರದ ಎಲ್ಲ ಪ್ರಕಟಣೆಗಳನ್ನು ಪ್ರೀತಿ ವಿಶ್ವಾಸದಿಂದ ಸ್ವಾಗತಿಸಲಿ ಎಂದು ಆಶಿಸುತ್ತಾ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಎಲ್ಲ ರೀತಿಯಲ್ಲಿಯೂ ಶುಭ ಹಾರೈಸುತ್ತೇನೆ.

(ಜಗದೀಶ್ ಶೆಟ್ಟರ್)

ಕರ್ನಾಟಕ ಸರ್ಕಾರ

ಗೋವಿಂದ ಕಾರಜೋಳ ವಿಧಾನ ಸೌಧ

ಸಣ್ಣ ನೀರಾವರಿ, ಬೆಂಗಳೂರು - 01

ಕನ್ನಡ ಮತ್ತು ಸಂಸ್ಕೃತಿ ಸಚಿವರು

ಶುಭಾಕಾಂಕ್ಷೆ

ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ರಾಷ್ಟ್ರೀಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಈಗಾಗಲೇ ಖ್ಯಾತಿಯನ್ನು ಗಳಿಸಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಾಹಿತ್ಯಿಕ, ಐತಿಹಾಸಿಕ, ವೈಜ್ಞಾನಿಕ ಮತ್ತು ಇತರ ಗ್ರಂಥಗಳನ್ನು ಪ್ರಕಟಿಸುವ ಮೂಲಕ ಮತ್ತು ರಾಷ್ಟ್ರೀಯ ವಿಚಾರಸಂಕಿರಣಗಳನ್ನು ಏರ್ಪಡಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ಬೆಳೆಯುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿರುವುದು ನನಗೆ ತುಂಬ ಸಂತೋಷವನ್ನು ತಂದುಕೊಟ್ಟಿದೆ. ಈ ಮೂಲಕ ಕನ್ನಡ ನಾಡಿನ ಜನತೆಗೆ ಈಗಾಗಲೇ ಮಹತ್ವದ ಕೃತಿಗಳು ಕನ್ನಡದಲ್ಲಿ ದೊರೆಯುವಂತಾಗಿರುವುದು ಮಾತ್ರವಲ್ಲದೆ, ಕನ್ನಡದ ಶ್ರೇಷ್ಠ ಕೃತಿಗಳ ಪರಿಚಯ ಇತರ ಭಾಷಾ ಬಾಂಧವರಿಗೂ ಆಗುವಂತೆ ಮಾಡುವ ದಿಕ್ಕಿನಲ್ಲಿ ಈ ಸಂಸ್ಥೆ ಕಾರ್ಯೋನ್ಮುಖವಾಗಬೇಕಾಗಿದೆ. ಈ ಕಾರ್ಯದಲ್ಲಿ ನಾಡಿನ ಖ್ಯಾತ ಲೇಖಕರು, ವಿದ್ವಾಂಸರು, ವಿಮರ್ಶಕರು ಸಹಕರಿಸುತ್ತಿರುವುದು ವಿಶೇಷ ಸಂಗತಿಯೇ ಆಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಶ್ರಯದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು ಪ್ರಾರಂಭವಾಗಿರುವುದು

ಸಂತೋಷದ ಸಂಗತಿ. ನಮ್ಮ ತರುಣ ಜನಾಂಗವನ್ನು ಈ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಗೊಳಿಸುವ ಕಾರ್ಯ ಇದರ ಮೂಲಕ ನಡೆಯುತ್ತದೆ ಎಂದು ನಂಬಿದ್ದೇನೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಕ್ರಮಗಳಲ್ಲಿ ನಾಡಿನ ಜನತೆ ಸಕ್ರಿಯವಾಗಿ ಭಾಗವಹಿಸಲಿ ಎಂದು ಹಾರೈಸುತ್ತೇನೆ.

ಗೋವಿಂದ ಎಂ. ಕಾರಜೋಳ

ಕರ್ನಾಟಕ ಸರ್ಕಾರ

ಬಸವರಾಜು, ಭಾ.ಆ.ಸೇ. ವಿಧಾನಸೌಧ

ಸರ್ಕಾರದ ಕಾರ್ಯದರ್ಶಿಗಳು ಬೆಂಗಳೂರು - 560 001

ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ

ಹಾರೈಕೆ

ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕುವೆಂಪು ಅವರ ಆಶಯದಂತೆ ಸಾಹಿತ್ಯ, ಸಂಸ್ಕೃತಿ ಮತ್ತು ಜ್ಞಾನ-ವಿಜ್ಞಾನ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಯಾಗಬಲ್ಲಂಥ ಗ್ರಂಥಗಳನ್ನು ಹೊರತರುತ್ತಿರುವುದು ತುಂಬ ಮಹತ್ವದ ಸಂಗತಿಯೇ ಆಗಿದೆ. ಇತರ ಯಾವ ಭಾಷೆಗಳಲ್ಲೂ ಇನ್ನೂ ಹೊರಬರದೇ ಇರುವ ವಿಲ್ ಡ್ಯೂರಾಂಟ್ ಅವರ `ನಾಗರಿಕತೆಯ ಕಥೆ', ಜೆ.ಡಿ. ಬರ್ನಾಲ್ ಅವರ `ಇತಿಹಾಸದಲ್ಲಿ ವಿಜ್ಞಾನ'ದಂಥ ಮಹತ್ವದ ಸಂಪುಟಗಳನ್ನೂ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಹತ್ವದ ರಚನೆಗಳನ್ನು ಒಳಗೊಂಡ ಸಂಚಯಗಳನ್ನೂ ಹೊರತರುತ್ತಿರುವುದೂ, ನಾಡಿನ ಇತರ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಸಂಬಂಧವನ್ನು ಏರ್ಪಡಿಸಿಕೊಂಡು ಮಹತ್ವದ ಕೃತಿಗಳನ್ನು ಬೆಳಕಿಗೆ ತರುತ್ತಿರುವುದೂ ಕರ್ನಾಟಕ ಸರ್ಕಾರಕ್ಕೆ ಮಾತ್ರವಲ್ಲದೆ, ಕನ್ನಡ ಜನತೆಗೆ ಹೆಮ್ಮೆಯನ್ನು ತರುವಂಥ ಸಂಗತಿಗಳಾಗುತ್ತವೆ ಎಂದು ನಂಬಿದ್ದೇವೆ.

ಇದುವರೆಗೆ ಪ್ರಕಟವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೃತಿಗಳ ಆಂಶಿಕ ಪರಿಷ್ಕರಣ ಯೋಜನೆಯನ್ನು ಕೈಗೊಂಡು, ಅವುಗಳನ್ನು ಹೊಸ ರೂಪದಲ್ಲಿ ಹೊರತರುತ್ತಿರುವುದು ಹಾಗೂ ಇದುವರೆಗೆ ಪ್ರಕಟವಾಗದಿರುವ ಅಂಬೇಡ್ಕರ್ ಅವರ ಚಿಂತನೆಗಳನ್ನೊಳಗೊಂಡ ಇತರ ಸಂಪುಟಗಳನ್ನು ಹೊರತರುವ ಕಾರ್ಯವನ್ನು ಹಮ್ಮಿಕೊಂಡಿರುವುದು ವಿಶೇಷವಾಗಿ ಸ್ತುತ್ಯರ್ಹವಾದ ಕಾರ್ಯವಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಣೆಗಳಿಗೆ ಮಾತ್ರವೇ ತನ್ನನ್ನು ಸೀಮಿತಗೊಳಿಸಿಕೊಳ್ಳದೆ, ಭಾರತೀಯ ಭಾಷೆಗಳ ಮತ್ತು ವಿದೇಶಿ ಭಾಷೆಗಳ ಅನುವಾದ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಇಂಬುಕೊಡಲಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು, ಸಂಶೋಧನ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗುತ್ತಿರುವುದು ಮತ್ತು ವಿಶ್ವವಿದ್ಯಾನಿಲಯಗಳ ಮಾನ್ಯತೆಯನ್ನು ಗಳಿಸಿಕೊಳ್ಳುತ್ತಿರುವುದು ವೈಯಕ್ತಿಕವಾಗಿಯೂ ನನಗೆ ವಿಶೇಷ ಸಂತೋಷವನ್ನುಂಟುಮಾಡುತ್ತಿದೆ.

ಒಟ್ಟಿನಲ್ಲಿ ಸಾಹಿತ್ಯ-ಸಂಸ್ಕೃತಿ-ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಆದರ್ಶ ರೀತಿಯಲ್ಲಿ ಪ್ರಾಧಿಕಾರ ಹೆಜ್ಜೆಹಾಕುತ್ತಾ ಮುನ್ನಡೆಯಲೆಂದೂ, ಹೊಸ-ಹೊಸ ವಿಕ್ರಮಗಳನ್ನು ಸ್ಥಾಪಿಸಲೆಂದೂ ಹಾರೈಸುತ್ತೇನೆ.

(ಬಸವರಾಜು)

ಕರ್ನಾಟಕ ಸರ್ಕಾರ

ಕೆ.ಆರ್. ರಾಮಕೃಷ್ಣ, ಕ.ಆ.ಸೇ. ಕನ್ನಡ ಭವನ, ಜೆ.ಸಿ. ರಸ್ತೆ

ಆಯುಕ್ತರು ಬೆಂಗಳೂರು - 560 002

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಾಸ್ತಾವಿಕ ನುಡಿ

ಕರ್ನಾಟಕ ಸರ್ಕಾರ 2005ರಲ್ಲಿ ಸ್ಥಾಪಿಸಿದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ವಿಲೀನಗೊಳಿಸಿ, ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಆಯಾಮಗಳನ್ನು ನೀಡಿದೆ. ಭಾರತೀಯ ಮತ್ತು ವಿದೇಶಿಯ ಭಾಷೆಗಳ ನಡುವಣ ಸಂಬಂಧಗಳನ್ನು ಬೆಳೆಸಿಕೊಂಡು ಬರುವುದರ ಹಾಗೂ ಆ ಭಾಷೆಗಳ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದರ ಮೂಲಕ ಕನ್ನಡ ಸಾಹಿತ್ಯವನ್ನು ಸಂವೃದ್ಧಿಗೊಳಿಸುವುದು ಮತ್ತು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಇತರ ಭಾಷೆಗಳಿಗೆ ಕೊಂಡೊಯ್ಯುವುದು ಹಾಗೂ ಮಾನವಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಗೆ ಪ್ರೋತ್ಸಾಹ ನೀಡುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಪ್ರಕಟಣೆಗಳನ್ನು ಹೊರತರುವುದು ಪ್ರಾಧಿಕಾರದ ಮುಖ್ಯ ಧ್ಯೇಯೋದ್ದೇಶವಾಗಿರುತ್ತದೆ. ಇದಕ್ಕೆ ಪೂರಕವಾಗಿ ಮತ್ತು ಪೋಷಕವಾಗಿ ರಾಷ್ಟ್ರೀಯ ಪ್ರಾದೇಶಿಕ ವಿಚಾರಗೋಷ್ಠಿಗಳನ್ನು ಏರ್ಪಡಿಸುವುದು, ಭಾಷಾಂತರದ ವಿವಿಧ ಮುಖಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ತರಬೇತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಈ ಧ್ಯೇಯಗಳ ಅಂಗವೇ ಆಗಿದೆ. ಇಂತಹ ಕಾರ್ಯಕ್ರಮಗಳನ್ನು ಯೋಜಿಸುತ್ತಿರುವ ಹಾಗೂ ವಿಶ್ವವಿದ್ಯಾಲಯಗಳ ಮಾನ್ಯತೆಯನ್ನು ಪಡೆದುಕೊಂಡು ಈ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ವಿಚಾರ ನನಗೆ ವೈಯಕ್ತಿಕವಾಗಿಯೂ ತುಂಬ ಸಂತೋಷವನ್ನುಂಟುಮಾಡಿದೆ.

ಈ ಕೆಲವೇ ವರ್ಷಗಳಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹೊರತಂದಿರುವ ಪ್ರಕಟಣೆಗಳು ತುಂಬ ಮಹತ್ವದವೇ ಆಗಿವೆ. ವಿಲ್ ಡ್ಯೂರಾಂಟ್ ಅವರ ‘ನಾಗರಿಕತೆಯ ಕಥೆ’, ಜೆ.ಡಿ.ಬರ್ನಾಲ್ ಅವರ ‘ಇತಿಹಾಸದಲ್ಲಿ ವಿಜ್ಞಾನ’ ಸಂಪುಟಗಳು ಯಾವುದೇ ಭಾಷೆಗೆ ಗೌರವಪ್ರಾಯವಾದ ಕೃತಿಗಳೇ ಆಗುತ್ತವೆ. ಅಂಥ ಸಾಹಸವನ್ನು ಭಾರತೀಯ ಭಾಷೆಗಳಲ್ಲಿ ಮೊದಲ ಬಾರಿಗೆ ಆಗುಮಾಡುತ್ತಿರುವುದು ವಿಶೇಷವಾಗಿ ಅಭಿನಂದನೀಯವಾದ ಕಾರ್ಯವಾಗಿದೆ. ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುವಾದಿತ ಕೃತಿಗಳ ಪರಿಷ್ಕರಣ ಯೋಜನೆ ಮತ್ತು ಅವರ ಇತರ ಸಂಪುಟಗಳ ಹೊಸ ಅನುವಾದದ ಪ್ರಕಟಣೆ ಯೋಜನೆ, ಕನಕದಾಸರ ಕೃತಿಗಳ ಅನುವಾದ ಯೋಜನೆ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಸಮಗ್ರ ಕೃತಿಗಳ ಕನ್ನಡದ ಅನುವಾದದ ಯೋಜನೆ, ಕೃಷ್ಣಾ ಐತೀರ್ಪಿನ ಕನ್ನಡ ಅನುವಾದ ಯೋಜನೆ ಮುಂತಾದವು ಹೊಸ ವಿಕ್ರಮವನ್ನು ಸ್ಥಾಪಿಸಲಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಭಾರತೀಯ ವಿದ್ಯಾಭವನದಂತಹ ಸಂಸ್ಥೆಗಳೊಂದಿಗೆ ಮತ್ತು ಇತರ ವಿಶ್ವವಿದ್ಯಾಲಯಗಳೊಡನೆ ಜಂಟಿ ಪ್ರಕಟಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಇಂಥ ಕಾರ್ಯಕ್ರಮಗಳಲ್ಲಿ ನಾಡಿನ ಖ್ಯಾತ ವಿದ್ವಾಂಸರು ಪಾಲ್ಗೊಳ್ಳುತ್ತಿರುವುದು ಕನ್ನಡಿಗರೆಲ್ಲ ಹೆಮ್ಮೆಪಟ್ಟುಕೊಳ್ಳಬಹುದಾದ ಬೆಳವಣಿಗೆಗಳೇ ಆಗಿವೆ ಎಂದು ನಂಬಿದ್ದೇನೆ. ಮುಂದೆಯೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇಂಥ ವಿಶಿಷ್ಟ ಕಾರ್ಯಕ್ರಮಗಳನ್ನು, ಮಹತ್ವದ ಪ್ರಕಟಣೆಗಳನ್ನು ಹೊರತರುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಿ, ಕನ್ನಡ ನಾಡಿನ ಮೆಚ್ಚಿನ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.

(ಕೆ. ಆರ್. ರಾಮಕೃಷ್ಣ)

ಪೀಠಿಕೆ

ಶ್ರೀ ಕುವೆಂಪು ಅವರು ಕನ್ನಡ ನಾಡಿನ ಹೆಮ್ಮೆಯ ರಾಷ್ಟ್ರಕವಿ. ಕನ್ನಡದ ಇನ್ನೊಬ್ಬ ವರಕವಿಗಳಾದ ಬೇಂದ್ರೆಯವರಿಂದಲೇ ಯುಗದ ಕವಿ, ಜಗದ ಕವಿ ಎಂದು ಕೀರ್ತಿತರಾಗಿದ್ದಂಥವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾಚೇತನವೂ ಅವರಾಗಿದ್ದರು. ಸಾಹಿತ್ಯದ ಅನೇಕ ಪ್ರಕಾರಗಳಿಗೆ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿರುವ ಹಿರಿಮೆಯೂ ಅವರದಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಹಿಡಿದು ಜ್ಞಾನಪೀಠ ಪ್ರಶಸ್ತಿಯವರೆಗೆ ರಾಷ್ಟ್ರಮಟ್ಟದ ಬಹುತೇಕ ಗೌರವ ಪ್ರಶಸ್ತಿಗಳೆಲ್ಲ ಅವರದಾಗಿವೆ. ರಾಷ್ಟ್ರಮಟ್ಟದ ಈ ಗೌರವ ಪ್ರಶಸ್ತಿಗಳೆಲ್ಲ ಕನ್ನಡದಲ್ಲಿ ಮೊದಲ ಬಾರಿಗೆ ಅವರನ್ನು ಅರಸಿಬಂದುವು. ದೇಶ-ವಿದೇಶಗಳ ವಿಶ್ವವಿದ್ಯಾನಿಲಯಗಳ ಹಾಗೂ ಪ್ರತಿಷ್ಠಿತ ಸಾಹಿತ್ಯಿಕ ಸಂಸ್ಥೆಗಳ ಗೌರವಾದರಗಳಿಗೂ ಅವರು ಪಾತ್ರರಾಗಿದ್ದರು.

ಶ್ರೀ ಕುವೆಂಪು ಅವರ ಶೈಕ್ಷಣಿಕ-ಸಾಹಿತ್ಯಿಕ ಹಿರಿಮೆ ಸಾಧನೆಗಳನ್ನು ಗುರುತಿಸಿ, ಅವರ ಹೆಸರಿನಲ್ಲಿ ಅಧ್ಯಯನ ಸಂಸ್ಥೆಗಳನ್ನು ಮಾತ್ರವಲ್ಲದೆ, ವಿಶ್ವವಿದ್ಯಾನಿಲಯವೊಂದನ್ನೂ ಸ್ಥಾಪಿಸಲಾಗಿದೆ. ಶ್ರೀ ಕುವೆಂಪು ಅವರ ಮಹಾಕಾವ್ಯವಾದ ‘ಶ್ರೀ ರಾಮಾಯಣ ದರ್ಶನಂ’ ಸೇರಿದಂತೆ ಅವರ ಸಾಹಿತ್ಯದ ಬಹ್ವಂಶ ಇಂಗ್ಲಿಷ್ನಂಥ ವಿದೇಶಿ ಭಾಷೆಗೆ ಮಾತ್ರವಲ್ಲದೆ ಹಿಂದಿಯಂಥ ಇತರ ಭಾರತೀಯ ಭಾಷೆಗಳಿಗೂ ಅನುವಾದಗೊಂಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಶ್ರೀ ಕುವೆಂಪು ಅವರ ಈ ಹೈಮಾಚಲೋಪಮ ಸಾಧನೆಗೆ ಯೋಗ್ಯವಾದ ರಾಷ್ಟ್ರೀಯ ಮಹತ್ವದ ಸಾಹಿತ್ಯಿಕ-ಸಾಂಸ್ಕೃತಿಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂಬುದು ಮತ್ತು ಅದು ಭಾರತೀಯ ಸಾಹಿತ್ಯಿಕ ಸಾಂಸ್ಕೃತಿಕ ಲೋಕದ ಹೆಮ್ಮೆಯ ಪ್ರತೀಕವಾದ ಸಂಸ್ಥೆಯಾಗಬೇಕೆಂಬುದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಮೂಲ ರೂವಾರಿ ಪ್ರೊ.ದೇ. ಜವರೇಗೌಡ ಅವರು. ‘ಕುವೆಂಪು ಭಾಷಾ ಭಾರತಿ’ಯ ಅಂಗವಾಗಿ ಆರಂಭಿಸಲಾಗಿದ್ದ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಈಗ ವಿಧ್ಯುಕ್ತವಾಗಿ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದಲ್ಲಿ ವಿಲೀನಗೊಳಿಸಲಾಗಿದ್ದು, ಅದರ ಎಲ್ಲ ಕಾರ್ಯಚಟುವಟಿಕೆಗಳೂ ಇನ್ನಷ್ಟು ವ್ಯಾಪ್ತಿ-ವೈವಿಧ್ಯಗಳೊಂದಿಗೆ ಮುಂದುವರಿಯಲಿವೆ. ‘ಕುವೆಂಪು ಭಾಷಾ ಭಾರತಿ’ ಕುವೆಂಪು ಸಾಹಿತ್ಯದ ಪ್ರಚಾರ-ಪ್ರಸಾರಗಳಿಗೆ ಮಾತ್ರವೇ ಮೀಸಲಾದ ಸಂಸ್ಥೆಯಾಗಿರದೆ, ಕನ್ನಡ ಸಾಹಿತ್ಯದ ಹಿರಿಮೆ-ಗರಿಮೆಗಳನ್ನು ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರೆಸುವ, ಭಾರತೀಯ ಸಾಹಿತ್ಯದ ಮತ್ತು ವಿಶ್ವಸಾಹಿತ್ಯದ ಉತ್ಕೃಷ್ಟ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವ ಮಹದಾಶಯವನ್ನು ಹೊಂದಿದೆ.

ವಿಲ್ ಡ್ಯೂರಾಂಟ್ ಅವರು `ನಾಗರಿಕತೆಯ ಕಥೆ' ಹಾಗೂ ಜೆ.ಡಿ. ಬರ್ನಾಲ್ ಅವರ `ಇತಿಹಾಸದಲ್ಲಿ ವಿಜ್ಞಾನ'ದಂಥ ಕೃತಿಗಳ ಕನ್ನಡ ಆವೃತ್ತಿಗಳನ್ನು ಹೊರತರುತ್ತಿರುವುದಲ್ಲದೆ, ಭಾರತೀಯ ವಿದ್ಯಾಭವನ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಂಥ ಸಂಸ್ಥೆಗಳ ಸಹಯೋಗದೊಂದಿಗೆ ಮಹತ್ವದ ಕೃತಿಗಳ ಅನುವಾದದ ಯೋಜನೆಗಳನ್ನೂ ಹಮ್ಮಿಕೊಂಡಿದೆ. ಹೀಗೆ ಸಾಹಿತ್ಯಿಕ, ಸಾಂಸ್ಕೃತಿಕ ವೈಜ್ಞಾನಿಕ ಮತ್ತು ತಾಂತ್ರಿಕ ಕಾರ್ಯಚಟುವಟಿಕೆಗಳ ಜೊತೆಗೆ ಅನುವಾದಕ್ಕೆ ಸಂಬಂಧಿಸಿದ ವಿವಿಧ ಶಿಕ್ಷಣ ಕ್ರಮಗಳನ್ನೂ ಏರ್ಪಡಿಸಲಾಗಿದೆ. ಅನುವಾದಿತ ಕೃತಿಗಳಿಗೆ ಮತ್ತು ಅನುವಾದ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಗಳಿಗೆ ಪುರಸ್ಕಾರ, ಪ್ರಶಸ್ತಿಗಳನ್ನು ನೀಡುವ ಕಾರ್ಯವನ್ನೂ ಮಾಡಲಾಗುತ್ತಿದೆ. ಅನುವಾದ ಕಾರ್ಯಗಳಿಗೆ ಪೂರಕವಾಗುವಂಥ ವಿಚಾರ-ಸಂಕಿರಣಗಳನ್ನೂ, ಕಾರ್ಯಶಿಬಿರಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ.

ಕರ್ನಾಟಕ ಸರ್ಕಾರ, ಪ್ರಾಧಿಕಾರಕ್ಕೆ ಹೊಸ ಹೊಸ ಯೋಜನೆಗಳನ್ನೂ ವಹಿಸಿಕೊಡುತ್ತಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಕೃತಿಗಳ ಅನುವಾದದ ಪರಿಷ್ಕರಣೆ (ಸಂಪುಟ 1 ರಿಂದ 14) ಮತ್ತು ಉಳಿದ ಕೃತಿಗಳ (ಸಂಪುಟ 15 ರಿಂದ 20) ಕನ್ನಡ ಅನುವಾದದ ಪ್ರಕಟಣೆ, ಕನಕದಾಸರ ಕೃತಿಗಳ ಅನುವಾದ, ಕಾವೇರಿ ಮತ್ತು ಕೃಷ್ಣ ಜಲವಿವಾದದ ಐತೀರ್ಪುಗಳ ಕನ್ನಡ ಅನುವಾದ, ಜ್ಞಾನಪೀಠ ಮತ್ತು ಇತರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಆಯ್ದ (ಸಂಚಯ) ಕೃತಿಗಳ ಪ್ರಕಟಣೆ ಮತ್ತು ಅನುವಾದ - ಇವುಗಳನ್ನು ಇಲ್ಲಿ ಮುಖ್ಯವಾಗಿ ಹೆಸರಿಸಬಹುದಾಗಿದೆ.

ಭಾರತೀಯ ಸಂತರ ಪರಂಪರೆಯಲ್ಲೇ ವಿಶಿಷ್ಟರೆಂದು ಖ್ಯಾತಿಯನ್ನು ಗಳಿಸಿದ್ದ ಸ್ವಾಮಿ ವಿವೇಕಾನಂದರ ಅಪರಾವತಾರವೆಂದೇ ಪರಿಗಣಿಸಲಾಗಿದ್ದ ಸ್ವಾಮಿ ರಂಗನಾಥಾನಂದರು ವಿವೇಕಾನಂದರಂತೆಯೇ ದೇಶ-ವಿದೇಶಗಳಲ್ಲಿ ಖ್ಯಾತಿಯನ್ನು ಗಳಿಸಿದ್ದರು. ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇರುವ ಇಂದಿರಾಗಾಂಧಿ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಸ್ವಾಮಿ ರಂಗನಾಥಾನಂದ ಜನ್ಮಶತಮಾನೋತ್ಸವ ಸಮಿತಿ ಹೊರತಂದ Monk without Frontiers ಎಂಬ ಸಂಸ್ಮರಣ ಗ್ರಂಥ ಈ ವಿಶಿಷ್ಟ ಸಂತರ ಅಪೂರ್ವ ಪ್ರತಿಭೆ, ಜಾತ್ಯತೀತ ಮನೋಧರ್ಮ, ನೈಜ ಧರ್ಮಶ್ರದ್ಧೆ, ವಿಶ್ವಪ್ರೇಮ ಮತ್ತು ಸಾಮಾಜಿಕ ಕಳಕಳಿಯಿಂದ ಕೂಡಿದ್ದ ಅವರ ಬಹುಮುಖೀ ವ್ಯಕ್ತಿತ್ವ ಇವನ್ನು ಮನಗಾಣಿಸುವ ಲೇಖನಗಳನ್ನು ಒಳಗೊಂಡಿದೆ.

ಶ್ರೀ ರಾಮಕೃಷ್ಣ ಮಠಕ್ಕೆ ಸೇರಿದ ವಿವಿಧ ಸ್ವಾಮಿಗಳು, ಶಾರದಾಮಠ ಮತ್ತು ಶಾರದಾ ರಾಮಕೃಷ್ಣ ಮಿಷನ್ನಿನ ಹಲವು ಪರಿವ್ರಾಜಿಕೆಯರು ಹಾಗೂ ಶ್ರೀ ರಂಗನಾಥಾನಂದರ ಭಕ್ತರು ಮತ್ತು ಅಭಿಮಾನಿಗಳು ಕಂಡಿರುವ ಶ್ರೀ ರಂಗನಾಥಾನಂದರ ಸಮಗ್ರ ವ್ಯಕ್ತಿತ್ವದ ವಿವಿಧ ಮುಖಗಳನ್ನು ಚಿತ್ರಿಸಿರುವ ಮೂರು ವಿಭಾಗಗಳನ್ನು ಒಳಗೊಂಡಿದೆ ಈ ಗ್ರಂಥ. ಮೊದಲ ಭಾಗದಲ್ಲಿ ಅವರಿಗೆ ಅರ್ಪಿಸಲಾದ ಪ್ರಶಸ್ತಿ ಪತ್ರವನ್ನೂ ಸೇರಿಸಲಾಗಿದೆ. ಈ ಮಹನೀಯರ ವಿಶಿಷ್ಟ ವ್ಯಕ್ತಿತ್ವವನ್ನು ಮನಗಾಣಿಸಿರುವ ಮಹದ್-ವ್ಯಕ್ತಿಗಳಲ್ಲಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ರಾಷ್ಟ್ರೀಯ ಖ್ಯಾತಿಯ ರಾಜಕಾರಣಿಗಳು, ಸಂತರು, ರಾಯಭಾರಿಗಳು, ರಾಜ್ಯಪಾಲರುಗಳು, ವಿದ್ವಾಂಸರು, ದೇಶ-ವಿದೇಶಗಳಲ್ಲಿನ ಅಭಿಮಾನಿಗಳು, ಅನುಯಾಯಿಗಳು, ಸಮಾಜದ ವಿವಿಧ ವರ್ಗಗಳಿಗೆ ಸೇರಿದ ವ್ಯಕ್ತಿಗಳು ಸೇರಿದ್ದಾರೆ. ಒಬ್ಬ ವ್ಯಕ್ತಿ ಹೇಗೆ ವಿಶ್ವಾದರಣೀಯರಾಗಿದ್ದರು ಎಂಬುದು ಆಶ್ಚರ್ಯ-ಆನಂದಗಳನ್ನು ಉಂಟುಮಾಡುತ್ತದೆ. ತತ್ವಶಾಸ್ತ್ರದ ಮೂಲಚೂಲಗಳನ್ನು ಅರಿತಿದ್ದ, ವಿವಿಧ ಧರ್ಮಗಳ ಸಾರಭೂತ ಅಂಶಗಳನ್ನು ಮೈಗೂಡಿಸಿಕೊಂಡಿದ್ದ, ಆಧುನಿಕ ವೈಜ್ಞಾನಿಕ ಬೆಳವಣಿಗೆಗಳನ್ನು ಅಧ್ಯಾತ್ಮದೊಡನೆ ಮೇಳವಿಸಿ ನಿರೂಪಿಸಬಲ್ಲವರಾಗಿದ್ದ, ಆಬಾಲವೃದ್ಧರಾದಿಯಾಗಿ ಎಲ್ಲರೊಡನೆ ಮುಕ್ತ ಹೃದಯದೊಂದಿಗೆ ಬೆರೆಯಬಲ್ಲವರಾಗಿದ್ದ, ಪ್ರಕಾಂಡ ಪಂಡಿತರಾಗಿದ್ದು, ಅಧ್ಯಾತ್ಮ ವಿಚಾರಗಳನ್ನು ಸುಲಭಗಮ್ಯವಾಗುವಂಥ ಸರಳವೂ, ಉದ್ಭೋಧಕವೂ ಆದ ರೀತಿಯಲ್ಲಿ ನಿರೂಪಿಸಬಲ್ಲಂಥ ಅತ್ಯಂತ ಪ್ರಭಾವಶಾಲಿ ಭಾಷಣಕಾರರಾಗಿದ್ದ ಶ್ರೀ ರಂಗನಾಥಾನಂದರು ಅಪರೂಪದ ಸಾಧಕರಾಗಿದ್ದಾರೆ.

ಅವರ ಈ ಬಹುಮುಖೀ ಸಾಧನೆಯನ್ನು ಮನಗಾಣಿಸುವ 133 ಲೇಖನಗಳ ಜೊತೆಗೆ ತಮ್ಮ ಗಮನಕ್ಕೆ ಬಂದ, ಬೇರೆಡೆಗಳಲ್ಲಿ ಪ್ರಕಟವಾಗಿದ್ದ ಇನ್ನೂ ಎರಡು ಲೇಖನಗಳನ್ನು ಅನುಬಂಧವಾಗಿ ಸೇರಿಸಿ, ಈ ಕನ್ನಡ ಆವೃತ್ತಿಯನ್ನು ಹೊರತರಲಾಗುತ್ತಿದೆ. ಕೊನೆಯ ಭಾಗದಲ್ಲಿ ಶ್ರೀ ರಂಗನಾಥಾನಂದರ ಬಹುಮುಖೀ ವ್ಯಕ್ತಿತ್ವ ಮತ್ತು ಸಾಧನೆಯ ಪ್ರತೀಕವಾಗಿರುವ ಚಿತ್ರಸಂಪುಟವನ್ನು ಅಳವಡಿಸಲಾಗಿದೆ. ಸದ್ಧರ್ಮ ಬೋಧಕವಾದ, ನಾಡಿನ ಜನತೆಯನ್ನು ಋಜುಪಥದಲ್ಲಿ ಕೊಂಡೊಯ್ಯಬಹುದಾದ, ಯುವಜನತೆಗೆ ಪ್ರೇರಣೆ-ಪ್ರೋತ್ಸಾಹಗಳನ್ನು ನೀಡಬಲ್ಲಂಥ ಈ ಗ್ರಂಥ ಯಾವುದೇ ಭಾಷೆಗೆ ಗೌರವಪ್ರಾಯವಾಗಬಲ್ಲದು. ಅವರು ರಚಿಸಿರುವ ಅನೇಕ ಗ್ರಂಥಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರವಲ್ಲದೆ, ಹಲವು ವಿದೇಶೀ ಭಾಷೆಗಳಲ್ಲೂ ಬೆಳಕುಕಂಡಿವೆ. ಕೆಲವು ಗ್ರಂಥಗಳು ಕನ್ನಡದಲ್ಲೂ ಹೊರಬಂದಿವೆ.

ಇಂಥ ಗ್ರಂಥವೊಂದನ್ನು ಹೊರತರಬೇಕಾಗಿರುವ ಔಚಿತ್ಯ ಮತ್ತು ಅರ್ಥಪೂರ್ಣತೆಗಳನ್ನು ಅರಿವು ಮಾಡಿಕೊಟ್ಟ ಪ್ರಸಿದ್ಧ ಸಾಹಿತಿಗಳೂ, ಶ್ರೇಷ್ಠ ಪ್ರಾಧ್ಯಾಪಕರೂ, ಬಹುಭಾಷಾತಜ್ಞರೂ ಆದ ಡಾ. ಪ್ರಭುಶಂಕರ ಅವರಿಗೆ, ಇದಕ್ಕೆ ಅಗತ್ಯವಾಗಿದ್ದ ಅನುಮತಿಯನ್ನು ಉದಾರವಾಗಿ ನೀಡಿದ ಕೋಲ್ಕತ್ತಾದ ಸಂಸ್ಮರಣ ಸಮಿತಿಯ ಪದಾಧಿಕಾರಿಗಳಿಗೆ, ಹೆಚ್ಚಿನ ಮಾಹಿತಿ ಮತ್ತು ಇತರ ವಿವರಗಳನ್ನು ಒದಗಿಸಿದ ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದ ಸ್ವಾಮೀಜಿಯವರಿಗೆ ಪ್ರಾಧಿಕಾರದ ಕೃತಜ್ಞತಾಪೂರ್ವಕ ವಂದನೆಗಳು.

ಪ್ರಾಧಿಕಾರದ ಕೆಲಸ ಕಾರ್ಯಗಳಲ್ಲಿ ಹಾಗೂ ಪ್ರಕಟಣೆಯ ವಿಚಾರದಲ್ಲಿ ಹೃತ್ಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಾಧಿಕಾರದ ರಿಜಿಸ್ಟ್ರಾರ್ ಶ್ರೀ ಪಿ. ನಾರಾಯಣಸ್ವಾಮಿ ಮತ್ತು ಇತರ ಸಿಬ್ಬಂದಿವರ್ಗದವರಿಗೂ, ಈ ಸಂಪುಟಗಳು ಸುಂದರವಾಗಿ ಹೊರಬರಲು ಕಾರಣರಾಗಿರುವ ಮಯೂರ ಪ್ರಿಂಟ್ ಆ್ಯಡ್ಸ್ನ ಶ್ರೀ ಬಿ.ಎಲ್. ಶ್ರೀನಿವಾಸ ಮತ್ತು ಅವರ ಸಿಬ್ಬಂದಿವರ್ಗದವರಿಗೂ, ನಮ್ಮ ವಂದನೆಗಳು.

23-3-2013ಪ್ರಧಾನ್ ಗುರುದತ್ತ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ

ಬೆಂಗಳೂರು.

ಪರಿವಿಡಿ

ಮೊದಲಮಾತು

ಶುಭಾಕಾಂಕ್ಷೆ

ಹಾರೈಕೆ

ಪ್ರಾಸ್ತಾವಿಕ ನುಡಿ

ಪೀಠಿಕೆ

ಭಾಗ 1

ಇಂದಿರಾ ಗಾಂಧೀ ಪ್ರಶಸ್ತಿ ನೀಡಿಕೆ ಸನ್ಮಾನ ಪತ್ರ

ಭಾಗ 2

ರಾಮಕೃಷ್ಣ ಮಠದ ಸಂನ್ಯಾಸಿಗಳ ದೃಷ್ಟಿಯಲ್ಲಿ

1.ಅಸಾಧಾರಣ ಆಧ್ಯಾತ್ಮಿಕ ಶಕ್ತಿ : ಸ್ವಾಮಿ ಆತ್ಮಸ್ಥಾನಂದ; ಅನು: ಎಚ್. ಎನ್. ಮುರಳೀಧರ

2.ಮುನ್ನಡೆಗಾಗಿ ಹಿನ್ನೋಟ : ಸ್ವಾಮಿ ಪ್ರಭಾನಂದ; ಅನು: ಎಚ್. ಎನ್. ಮುರಳೀಧರ

3.ವಿಶಿಷ್ಟ ಜೀವನ : ಸ್ವಾಮಿ ಸ್ಮರಣಾನಂದ; ಅನು: ಎಚ್. ಎನ್. ಮುರಳೀಧರ

4.ಶ್ರೇಷ್ಠತೆಯ ಸಾಕಾರ : ಸ್ವಾಮಿ ಭಜನಾನಂದ; ಅನು: ಎಚ್. ಎನ್. ಮುರಳೀಧರ

5.ರಾಮಕೃಷ್ಣ ಆಂದೋಲನದ ಉತ್ಕೃಷ್ಟ ಸಂದೇಶಕಾರ : ಸ್ವಾಮಿ ಜಿತಾತ್ಮಾನಂದ;

ಅನು: ಎಚ್. ಎನ್. ಮುರಳೀಧರ

6.ಶೋಭಾಯಮಾನವಾದ ಮತ್ತು ವಿಶೇಷವಾದ ಜೀವನ : ಸ್ವಾಮಿ ತಥಾಗತಾನಂದ;

ಅನು: ಎಚ್. ಎನ್. ಮುರಳೀಧರ

7.ಮಹಾನತೆಯ ಪ್ರಪಂಚದ ಒಂದು ಕಿಡಿ : ಸ್ವಾಮಿ ಬಾಣೇಶಾನಂದ; ಅನು: ವಿ. ರಘು

8.ಸ್ವಾಮಿ ರಂಗನಾಥಾನಂದಜೀಯವರ ದಿವ್ಯಸ್ಮೃತಿ : ಸ್ವಾಮಿ ಮುಖ್ಯಾನಂದ; ಅನು: ವಿ. ರಘು

9.ಮಾನವ ರೂಪದ ದೈವತ್ವ : ಸ್ವಾಮಿ ಒಬ್ಬ ಸಂನ್ಯಾಸಿ; ಅನು: ವಿ. ರಘು

10.ಅವರೊಬ್ಬ ಮಹಾತ್ಮ : ಸ್ವಾಮಿ ಸರ್ವಾಗತಾನಂದ; ಅನು: ವಿ. ರಘು

11.ತುಳಿತಕ್ಕೊಳಗಾದವರ ಬಗೆಗಿನ ಅಪಾರ ಕಾಳಜಿ : ಸ್ವಾಮಿ ನಿಖಾಲಾತ್ಮಾನಂದ; ಅನು: ವಿ. ರಘು

12.ಮಹಾತ್ಮ : ಸ್ವಾಮಿ ಗೋಲೋಕಾನಂದ; ಅನು: ವಿ. ರಘು

13.ಕೆಲವು ನೆನಪುಗಳು : ಸ್ವಾಮಿ ಅನನ್ಯಾನಂದ; ಅನು: ವಿ. ರಘು

14.ಕಟ್ಟಾ ಪರಿಪೂರ್ಣತಾವಾದಿ : ಸ್ವಾಮಿ ನಿಖಿಲೇಶ್ವರಾನಂದ; ಅನು: ವಿ. ರಘು

15.ಮಹಾ ಚೇತನಕ್ಕೆ ಶ್ರದ್ಧಾಂಜಲಿ : ಸ್ವಾಮಿ ಹರ್ಷಾನಂದ; ಅನು: ವಿ. ರಘು

16.ಅವರ ಮಾನವೀಯ ಮತ್ತು ದಿವ್ಯ ವ್ಯಕ್ತಿತ್ವದ ಇಣುಕುನೋಟಗಳು : ಸ್ವಾಮಿ ಕೀರ್ತಿದಾನಂದ;

ಅನು: ಡಾ. ಪ್ರಭುಶಂಕರ

17.ನಾನು ಸ್ವಾಮೀಜಿಯವರ ಕಾರ್ಯಕ್ಕಾಗಿ ಮತ್ತೆ ಬರುತ್ತೇನೆ : ಸ್ವಾಮಿ ನಿರ್ಮುಕ್ತಾನಂದ;

ಅನು: ಜಿ. ಎಸ್. ಜಯದೇವ

18.ಅವರ ಪ್ರೀತಿ ನಮ್ಮನ್ನು ಸಮ್ಮೋಹಗೊಳಿಸಿತ್ತು : ಸ್ವಾಮಿ ತತ್ತತವ ಬೋಧಾನಂದ; ಅನು: ಜಿ. ಎಸ್. ಜಯದೇವ

19.ಧ್ಯೇಯವಾದಿ ಸನ್ಯಾಸಿ : ಸ್ವಾಮಿ ಸುನಿರ್ಮಲಾನಂದ; ಅನು: ಜಿ. ಎಸ್. ಜಯದೇವ

20.ವಾಸ್ತವಾರ್ಥದಲ್ಲಿನ ವೇದಾಂತಿ : ಸ್ವಾಮಿ ಶಿತಿಕಂಠಾನಂದ; ಅನು: ಜಿ. ಎಸ್. ಜಯದೇವ

21.ಅವರದು ವಿಶ್ವವ್ಯಾಪಕವಾದ ವ್ಯಕ್ತಿತ್ವ : ಸ್ವಾಮಿ ವೀತಮೋಹನಾನಂದ; ಅನು: ಜಿ. ಎಸ್. ಜಯದೇವ

22.ಪವಿತ್ರ ಸಹವಾಸದಲ್ಲಿ ಬೆಳಕನ್ನು ಪಡೆದ ಕ್ಷಣಗಳು : ಸ್ವಾಮಿ ಶಶಾಂಕಾನಂದ; ಅನು: ಜಿ. ಎಸ್. ಜಯದೇವ

23.ನಾವು ಅವರ ಸಮಾನರು ಎಂಬಂತೆ : ಸ್ವಾಮಿ ನಿಃಸ್ವಾನಂದ; ಅನು: ಜಿ. ಎಸ್. ಜಯದೇವ

24.ಅವರು ಬ್ರಹ್ಮಜ್ಞಾನಿಗಳು ಎಂಬುದನ್ನು ಅರಿತುಕೊಳ್ಳಿ : ಸ್ವಾಮಿ ವೇದಪುರುಷಾನಂದ; ಅನು: ವಿ. ಕೃಷ್ಣ

25.ಎಲ್ಲರ ಗೆಳೆಯ : ಸ್ವಾಮಿ ಶಕ್ತಾನಂದ; ಅನು: ವಿ. ಕೃಷ್ಣ

26.ಸ್ವಂತ ಬೆಳಕಿನಲ್ಲಿ ಬೆಳಗಿದವರು : ಸ್ವಾಮಿ ಮುಕ್ತಿರೂಪಾನಂದ; ಅನು: ವಿ. ಕೃಷ್ಣ

27.ಪರಮಹಂಸರ ನಿಜವಾದ ಭಕ್ತ : ಸ್ವಾಮಿ ಶಿವಪ್ರಸಾದಾನಂದ; ಅನು: ವಿ. ಕೃಷ್ಣ

28.ಸ್ವಾಮಿ ರಂಗನಾಥಾನಂದರು- ನಾನು ಕಂಡಂತೆ : ಸ್ವಾಮಿ ಸುರೇಶಾನಂದ; ಅನು: ವಿ. ಕೃಷ್ಣ

29.ಕ್ರಿಯಾತ್ಮಕ ವ್ಯಕ್ತಿತ್ವ : ಸ್ವಾಮಿ ಆತ್ಮಘನಾನಂದ; ಅನು: ವಿ. ಕೃಷ್ಣ

30.ಮಾನವರಲ್ಲಿ ದೇವರನ್ನು ಕಂಡ ವಿಶ್ವಮಾನವ : ಸ್ವಾಮಿ ಆತ್ಮೇಶಾನಂದ; ಅನು: ವಿ. ಕೃಷ್ಣ

31.ಬೇರೆಯವರಲ್ಲಿರುವ ಉತ್ತಮಾಂಶಗಳನ್ನು ಹೊರಗೆಳೆಯುತ್ತಿದ್ದ ಮಹಾರಾಜ್ :ಸ್ವಾಮಿ ರಾಮಾನುಜಾನಂದ; ಅನು: ವಿ. ಕೃಷ್ಣ

32.ಆತ್ಮಶಕ್ತಿ ಮತ್ತು ಭಗವತ್ಕೃಪೆ ಮನುಷ್ಯನನ್ನು ಶ್ರೇಷ್ಠನನ್ನಾಗಿಸುತ್ತವೆ : ಸ್ವಾಮಿ ಬೋಧಿಸತ್ವಾನಂದ; ಅನು: ವಿ. ಕೃಷ್ಣ 33.ಕೋಪವನ್ನು ಗೆಲ್ಲುವ ಬಗೆಯನ್ನು ಅವರು ನನಗೆ ತಿಳಿಸಿಕೊಟ್ಟರು : ಸ್ವಾಮಿ ಸ್ವಪ್ರಭಾನಂದ; ಅನು: ವಿ. ಕೃಷ್ಣ

34.ದೇವರ ಬಗೆಗಿದ್ದ ತೀವ್ರಾಸಕ್ತಿ, ಮಾನವರ ಬಗೆಗಿದ್ದ ಪ್ರೀತಿ- ಇವುಗಳ ಮೂರ್ತಸ್ವರೂಪ:

ಸ್ವಾಮಿ ಅಸೀಮಾತ್ಮಾನಂದ; ಅನು: ವಿ. ಕೃಷ್ಣ

35.ಸ್ವಾಮಿ ರಂಗನಾಥಾನಂದಜೀ ಮಹಾರಾಜ್ ಅವರ ನೆನಪುಗಳು : ಸ್ವಾಮಿ ಆಸಕ್ತಾನಂದ;

ಅನು: ವಿ. ಕೃಷ್ಣ

36.ಸ್ವಾಮಿ ರಂಗನಾಥಾನಂದ ಅವರ ನೆನಪುಗಳು : ಸ್ವಾಮಿ ಸತ್ಯಲೋಕಾನಂದ; ಅನು: ವಿ. ಕೃಷ್ಣ

37.ಆದರ್ಶಪ್ರಾಯರಾದ ಋಷಿ : ಸ್ವಾಮಿ ಬುದ್ಧದೇವಾನಂದ; ಅನು: ವಿ. ಕೃಷ್ಣ

ಭಾಗ 3

ಶಾರದಾಮಠದ ಮತ್ತು ರಾಮಕೃಷ್ಣ ಶಾರದಾ ಮಿಷನ್ನಿನ ಸಂನ್ಯಾಸಿನಿಯರ ದೃಷ್ಟಿಯಲ್ಲಿ

38.ಅವರು ನಮಗೆ ಶಕ್ತಿ, ಬೆಂಬಲ, ಧೈರ್ಯ ಮತ್ತು ಸ್ಫೂರ್ತಿಗಳನ್ನು ನೀಡಿದರು :

ಪ್ರವ್ರಾಜಿಕಾ ಅಜಯಪ್ರಾಣಾ; ಅನು: ಆತ್ಮಜನಾನಂದ

39.ಅವರು `ನಮ್ಮವರೇ' ಆಗಿದ್ದರು : ಪ್ರವ್ರಾಜಿಕಾ ಧ್ರುವಪ್ರಾಣಾ; ಅನು: ಆತ್ಮಜನಾನಂದ

40.ಪರಿಪೂರ್ಣ ವೇದಾಂತಿ : ಪ್ರವ್ರಾಜಿಕಾ ಆತ್ಮಪ್ರಾಣಾ; ಅನು: ಆತ್ಮಜನಾನಂದ

41.ನಾನು ಆಶ್ರಮಕ್ಕೆ ಧಾವಿಸಿದೆ : ಪ್ರವ್ರಾಜಿಕಾ ಶ್ರೀಕಾಂತಪ್ರಾಣಾ; ಅನು: ಆತ್ಮಜನಾನಂದ

ಭಾಗ 4

ಭಕ್ತರ ಮತ್ತು ಅಭಿಮಾನಿಗಳ ದೃಷ್ಟಿಯಲ್ಲಿ

42.ಒಬ್ಬ ಅಸಾಧಾರಣ ವ್ಯಕ್ತಿ : ಶ್ರೀಮತಿ ಇಂದಿರಾಗಾಂಧಿ; ಅನು: ಆತ್ಮಜನಾನಂದ

43.ನಮ್ಮ ದೇಶದ ಸಂಸ್ಕೃತಿ ಮೂರ್ತಿವೆತ್ತ ರಾಯಭಾರಿ : ಶ್ರೀ ಬಿ. ಡಿ. ಜತ್ತಿ; ಅನು: ಆತ್ಮಜನಾನಂದ

44.ನಿಜವಾದ ಸಂನ್ಯಾಸಿ : ಡಾ. ಮನಮೋಹನ್ ಸಿಂಗ್; ಅನು: ಆತ್ಮಜನಾನಂದ

45.ಸ್ವಾಮಿ ರಂಗನಾಥಾನಂದರ ಪಾದದಡಿಯಲ್ಲಿ : ಶ್ರೀ ಎಲ್. ಕೆ. ಅಡ್ವಾಣಿ; ಅನು: ಆತ್ಮಜನಾನಂದ

46.ಆಜನ್ಮ ಶಿಕ್ಷಕ : ಶ್ರೀ ಪಿ. ಸಿ. ಅಲೆಕ್ಸಾಂಡರ್; ಅನು: ಆತ್ಮಜನಾನಂದ

47.ಸ್ವಾಮಿ ರಂಗನಾಥಾನಂದರಿಗೆ ಶ್ರದ್ಧಾಂಜಲಿ : ಡಾ. ಕರಣ್ಸಿಂಗ್; ಅನು: ಆತ್ಮಜನಾನಂದ

48.ಒಬ್ಬ ಮಹಾತ್ಮನಿಗೆ ಶ್ರದ್ಧಾಂಜಲಿ : ಶ್ರೀ ಐ. ಕೆ. ಗುಜ್ರಾಲ್; ಅನು: ಆತ್ಮಜನಾನಂದ

49.ನನ್ನ ಮಾನಸ ಗುರು : ಶ್ರೀ ಆರ್. ಕೆ. ತ್ರಿವೇದಿ; ಅನು: ಆತ್ಮಜನಾನಂದ

50.ಒಂದು ದೇದೀಪ್ಯಮಾನ ಆತ್ಮ : ಸ್ರೀ ಟಿ. ಎನ್. ಚತುರ್ವೇದಿ; ಅನು: ಕೆ. ಆರ್. ಮೋಹನ್

51.ಮರೆಯಲಾಗದ ಸ್ವಾಮಿ ರಂಗನಾಥಾನಂದ : ಶ್ರೀ ನಿತೇಶ್ ಸೇನ್ಗುಪ್ತ;

ಅನು: ಕೆ. ಆರ್. ಮೋಹನ್

52.ಒಬ್ಬ ಉಜ್ವಲ ವ್ಯಕ್ತಿಯ ನೆನಪುಗಳು : ಶ್ರೀ ಗಿರೀಶ್ ಎನ್. ಮೆಹ್ರಾ; ಅನು: ಕೆ. ಆರ್. ಮೋಹನ್

53.ವಿದ್ವತ್ಪೂರ್ಣ, ಕಾಂತಿಯುಕ್ತ, ಪ್ರಶಾಂತ ಮಹಾಜ್ಞಾನಿ : ಶ್ರೀ ಜೆ. ರಾಮಬಾಬು;

ಅನು: ಕೆ. ಆರ್. ಮೋಹನ್

54.ಇವತ್ತು ನಾನೇದರೂ ಆಗಿದ್ದರೆ, ಅದು ಅವರ ಅನುಗ್ರಹ : ಶ್ರೀ ಕೆ. ಕೆ. ಚೋಪ್ರಾ; ಅನು: ಕೆ. ಆರ್. ಮೋಹನ್

55.ಕಾಶ್ಮೀರದಲ್ಲಿ ಕೆಲವು ಪ್ರಮುಖ ಘಟನೆಗಳು : ಶ್ರೀ ಸಿ. ಎಲ್. ಸಪ್ರು;

ಅನು: ಕೆ. ಆರ್. ಮೋಹನ್

56.ಒಬ್ಬ ಪ್ರಾಮಾಣಿಕ ಗುರು : ಶ್ರೀ ಲಾಲೀ ರಾಮು ರಾಮದಾಸ್; ಅನು: ಕೆ. ಆರ್. ಮೋಹನ್

57.ಒಬ್ಬ ಮಹಾನ್ ಸಂತ ಮತ್ತು ಮಾನವತಾವಾದಿ : ಶ್ರೀ ಎಂ. ಲಕ್ಷ್ಮೀಕುಮಾರ್;ಅನು: ಕೆ. ಆರ್. ಮೋಹನ್

58.ಸ್ವಾಮಿ ರಂಗನಾಥಾನಂದ : ಶ್ರೀಮತಿ ಕಪಿಲಾ ವಾತ್ಸ್ಯಾಯನ; ಅನು: ಕೆ. ಆರ್. ಮೋಹನ್

59.ಭಾರತದ ಮಹಾಪ್ರಾಜ್ಞರಲ್ಲಿ ಓರ್ವರು : ಶ್ರೀ ಎ.ಎಲ್. ನಾರಾಯಣನ್; ಅನು: ಕೆ. ಆರ್. ಮೋಹನ್

60.ಭಾರತೀಯ ವಿದ್ಯಾಭವನ ಮತ್ತು ಸ್ವಾಮಿ ರಂಗನಾಥಾನಂದ : ಶ್ರೀ ಮತ್ತೂರು ಕೃಷ್ಣಮೂರ್ತಿ;

ಅನು: ಕೆ. ಆರ್. ಮೋಹನ್

61.ನನ್ನ ಪ್ರಾಮಾಣಿಕ ಮಿತ್ರ ಮತ್ತು ಗುರು : ಶ್ರೀ ಇ. ಪಿ. ಚೆಲಿಶೆವ್; ಅನು: ಕೆ. ಆರ್. ಮೋಹನ್

62.ಸ್ವಾಮಿ ರಂಗನಾಥಾನಂದರ ಜತೆ ನನ್ನ ಭೇಟಿಗಳು : ಶ್ರೀ ಇರಿನಾ ಪಿ. ಚೆಲಿಶೇವ್;

ಅನು: ಕೆ. ಆರ್. ಮೋಹನ್

63.ಸ್ವಾಮಿ ರಂಗನಾಥಾನಂದ: ಒಂದು ಅಚ್ಚಳಿಯದ ಸಾನ್ನಿಧ್ಯ : ಶ್ರೀ ಎಂ. ಶಿವರಾಮಕೃಷ್ಣ;

ಅನು: ಕೆ. ಆರ್. ಮೋಹನ್

64.ಮಹಾತ್ಮರ ನೆನಪುಗಳು : ಶ್ರೀ ರತ್ನಪ್ರೊವಾ ಸೇಠ್; ಅನು: ನಿತ್ಯಸ್ಥಾನಂದ

65. ಮಹಾಪುರುಷರೊಬ್ಬರ ನಿತ್ಯನೂತನ ಸ್ಮೃತಿ : ಶ್ರೀ ಪಿ. ಪರಮೇಶ್ವರನ್; ಅನು: ನಿತ್ಯಸ್ಥಾನಂದ

66.ವಿವೇಕಾನಂದ ಕೇಂದ್ರದ ಶಕ್ತಿನಿಧಿ : ಶ್ರೀಮತಿ ನಿವೇದಿತಾ ರಘುನಾಥ ಭಿಡೇ; ಅನು: ನಿತ್ಯಸ್ಥಾನಂದ

67.ಪ್ರೇಮಮೂರ್ತಿ : ಶ್ರೀ ಕೇದಾರನಾಥ ಲಾಭ್; ಅನು: ನಿತ್ಯಸ್ಥಾನಂದ

68.ಕೇಳುಗರನ್ನು ಮಂತ್ರಮುಗ್ಧರಾಗಿಸಿರುವ ಮಹಾ ವಾಗ್ಮಿ : ಡಾ. ಪ್ರಭುಶಂಕರ; ಅನು: ಡಾ. ಪ್ರಭುಶಂಕರ

69. ಅವರು ನನ್ನ ಬಾಳಿಗೆ ರಾಮಕೃಷ್ಣರನ್ನು ತಂದುಕೊಟ್ಟರು : ಶ್ರೀಮತಿ ಕಮಲಾ ಜಯರಾಮ್; ಅನು: ವಿ. ಕೃಷ್ಣ

70. ಸ್ವಾಮಿ ರಂಗನಾಥಾನಂದರ ನೆನಪು ನಮ್ಮಲ್ಲಿ ಅಮರವಾಗಿದೆ : ಶ್ರೀಮತಿ ಸಮಿತಾರಾಯ್; ಅನು: ವಿ. ಕೃಷ್ಣ

71.ವಿಶ್ವವ್ಯಾಪಿ ಸ್ವಾಮಿ ರಂಗನಾಥಾನಂದರು : ಶ್ರೀ ಯೋ ವಾನ್ ಓರ್ಷೊವೆನ್; ಅನು: ವಿ. ಕೃಷ್ಣ

72.ಹೃದಯದಾಳದಿಂದ ಮೂಡಿಬಂದ ನೆನಪುಗಳು :

ಶ್ರೀಮತಿ ಮಾರಿಯಾ ಟ್ರಾಂಪ್ ಮತ್ತು ಹರ್ಮಾ ವ್ಯಾನ್ ಜೋನ್; ಅನು: ವಿ. ಕೃಷ್ಣ

73.ನನ್ನಲ್ಲಿ ಅಧ್ಯಾತ್ಮದ ಅರಿವನ್ನು ಜಾಗೃತಗೊಳಿಸಿದವರು :

ಶ್ರೀಮತಿ ಆಂಟೊಯ್ನೆಟ್ ಡಬ್ಲ್ಯೂ. ಎಮ್. ಥೋಯೆನ್ (ಚಂದ್ರಾವಳಿ); ಅನು: ವಿ. ಕೃಷ್ಣ

74.ಸಾಕ್ಷಾತ್ಕಾರವನ್ನು ಪಡೆದ ಮಹಾನುಭಾವ : ಸಿಗ್ಫ್ರೈಡ್ ವ್ಯಾನ್ ಹೇಕ್; ಅನು: ವಿ. ಕೃಷ್ಣ

75.ಶ್ರೀ ರಂಗನಾಥಾನಂದರ ಭೇಟಿ - ಒಂದು ಆಹ್ಲಾದಕರ ಅನುಭವ : ಶ್ರೀ ಸೂರ್ಯಗ್ರೀನ್;

ಅನು: ವಿ. ಕೃಷ್ಣ

76.ನನ್ನ ಆಧ್ಯಾತ್ಮಿಕ ಮಾತೆ : ಶ್ರೀಮತಿ ರಿಯಾ ಕೆಲ್ಡರ್ಮನ್ - ಡಿ ವಾರ್ಡ್; ಅನು: ವಿ. ಕೃಷ್ಣ

77.ಅಸಾಧಾರಣ ಪ್ರತಿಭಾಶಾಲಿ : ಶ್ರೀ ರಘುರಾಮನ್; ಅನು: ವಿ. ಕೃಷ್ಣ

78.ಅಧ್ಯಾತ್ಮಕ್ಷೇತ್ರದ ದೈತ್ಯ : ಶ್ರೀ ಅಮೃತಲಿಂಗಂ ಚಿನ್ನತಂಬಿ; ಅನು: ವಿ. ಕೃಷ್ಣ

79.ಎರಡನೆಯ ವಿವೇಕಾನಂದ : ಶ್ರೀ ಸುಮಿತ್ರನೋಮ; ಅನು: ವಿ. ಕೃಷ್ಣ

80.ಅವರ ಮಲೇಷಿಯಾ ಭೇಟಿಗಳು- ಕೆಲವು ಚಿಂತನೆಗಳು :

ತೋ ಪುಆನ್ (ಶ್ರೀಮತಿ) ಉಮಾಸುಂದರಿ ಸಂಬಂಧನ್; ಅನು: ವಿ. ಕೃಷ್ಣ

81.ಅವಕಾಶವಂಚಿತರ ಸೇವೆಯನ್ನು ಮಾಡಲು ನಮ್ಮನ್ನು ಪ್ರೋತ್ಸಾಹಿಸಿದವರು ಅವರು

ಶ್ರೀಮತಿ ಸುಮನ್ ರಾಜ್ಯಾಧ್ಯಕ್ಷ; ಅನು: ವಿ. ಕೃಷ್ಣ

82.ಮಹಾಪುರುಷ ಸ್ವಾಮಿ ರಂಗನಾಥಾನಂದರು : ಶ್ರೀ ಎಸ್. ಜಯರಾಮನ್; ಅನು: ಎಚ್. ಸಿ. ವಿಶ್ವನಾಥ್

83.ಅವರನ್ನು ನಾನು ಹೇಗೆ ಮರೆಯಲಿ? : ಶ್ರೀ ಇ. ವಿ. ಎನ್. ಚಾರಿ;ಅನು: ಎಚ್. ಸಿ. ವಿಶ್ವನಾಥ್

84. ಅವರ ಉಪಸ್ಥಿತಿಯನ್ನು ನಾನು ಯಾವಾಗಲೂ ಅನುಭವಿಸುತ್ತೇನೆ : ಶ್ರೀಕೃಷ್ಣ ಮುರಾರಿ; ಅನು: ಎಚ್. ಸಿ. ವಿಶ್ವನಾಥ್

85.ನನ್ನ ಮಿತ್ರ, ತತ್ತ್ವಜ್ಞಾನಿ ಮತ್ತು ಮಾರ್ಗದರ್ಶಕ : ಡಾ. ಶುನಿಲಾ ಮಲಿಕ್; ಅನು: ಎಚ್. ಸಿ. ವಿಶ್ವನಾಥ್

86.ಅವರು ನಮ್ಮ ಜೀವನಗಳನ್ನು ರೂಪಿಸಿದರು: ಶ್ರೀಮತಿ ಎಸ್. ಲಕ್ಷ್ಮೀದೇವಿ;ಅನು: ಎಚ್. ಸಿ. ವಿಶ್ವನಾಥ್

87.ನನ್ನ ಜೀವನದ ಇಂಧನ : ಶ್ರೀಮತಿ ತಾರಾದೇವಿ ಎಸ್. ಅಶೋಕ್; ಅನು: ಎಚ್. ಸಿ. ವಿಶ್ವನಾಥ್

88.ಅವರು ನನಗೆ ಮಾರ್ಗದರ್ಶನ ಮಾಡುತ್ತಲೇ ಇರುತ್ತಾರೆ : ಶ್ರೀಮತಿ ಎಸ್. ಉಮಾದೇವಿ; ಅನು: ಎಚ್. ಸಿ. ವಿಶ್ವನಾಥ್

89.ಮಹಾನ್ ಆತ್ಮ ಮತ್ತು ಗುರುವಿನ ಸ್ಮರಣೆಯಲ್ಲಿ : ಶ್ರೀಮತಿ ಜಯಾ ಎಡಿತ್ ಕೌಲ್ಸನ್; ಅನು: ಎಚ್. ಸಿ. ವಿಶ್ವನಾಥ್

90.ಒಂದು ಮಹಾಸೌಭಾಗ್ಯ : ಶ್ರೀ ರಾಜಕುಮಾರ್ ವೀರ್; ಅನು: ಎಚ್. ಸಿ. ವಿಶ್ವನಾಥ್

91.ಪ್ರೀತಿಯ ಕ್ಷೇತ್ರ : ಶ್ರೀಮತಿ ಸುಜಾತಾ ಲೀಮನ್; ಅನು: ಎಚ್. ಸಿ. ವಿಶ್ವನಾಥ್

92.ಪೂಜ್ಯ ಸ್ವಾಮೀಜಿಯವರ ಬಗೆಗಿನ ಮೊದಲ ನೆನಪುಗಳು : ಶ್ರೀಮತಿ ನಿರ್ಮಲಾ ಬಿಡಾನಿ; ಅನು: ಎಚ್. ಸಿ. ವಿಶ್ವನಾಥ್

93.ಸರಳ ಜೀವನ, ಉನ್ನತ ಚಿಂತನ : ಶ್ರೀಮತಿ ಮೀನಾಕ್ಷಿ ಶಿವರಾಮಕೃಷ್ಣನ್; ಅನು: ಎಚ್. ಸಿ. ವಿಶ್ವನಾಥ್

94.ಅದ್ಭುತವಾದ ಸ್ವಾಮೀಜಿ : ಶ್ರೀಮತಿ ಫಾಂಟೇನ್ ಎಪ್ಲರ್; ಅನು: ಎಚ್. ಸಿ. ವಿಶ್ವನಾಥ್

95.ಪ್ರಬುದ್ಧಮಯಿ ಗುರು : ಶ್ರೀಮತಿ ವೊನೆ ಮ್ಯಾಲಿಕೆ; ಅನು: ಡಾ. ಶ್ರೀರಾಮಭಟ್ಟ

96.ಜ್ಞಾನ ಪ್ರದೀಪ : ಶ್ರೀಮತಿ ವೀಣಾರಾವ್; ಅನು: ಡಾ. ಶ್ರೀರಾಮಭಟ್ಟ

97.ಬರ್ಲಿನ್ ಉಪನ್ಯಾಸಗಳು ಮತ್ತು ಅವುಗಳ ಸಮಕಾಲೀನ ಪ್ರಸ್ತುತತೆ : ಶ್ರೀ ಹಿಲ್ಟ್ರೂಡ್ ರುಸ್ತೌ; ಅನು: ಡಾ. ಶ್ರೀರಾಮಭಟ್ಟ

98.ಅವರು ಈ ಜಗದ ವಿಶೇಷ ಸೃಷ್ಟಿ : ಶ್ರೀ ದಿಗಂಬರ್ ಪಾತ್ರ; ಅನು: ಡಾ. ಶ್ರೀ ರಾಮಭಟ್ಟ

99.ನನ್ನ ದೌರ್ಬಲ್ಯವನ್ನು ಮೀರಿನಿಲ್ಲಲು ನನಗವರು ನೆರವಾದರು : ಶ್ರೀ ಜಿ. ಅಖಿಲಾಂಡಮ್;

ಅನು: ಡಾ. ಶ್ರೀರಾಮಭಟ್ಟ

100.ತಂದೆಯೂ ನೀನೆ, ತಾಯಿಯೂ ನೀನೆ : ಶ್ರೀ ಗ್ಯಾಬ್ರಿಯೆಲ್ ಅರ್ಪಿತಾ ಸ್ಟೀಯರ್; ಅನು: ಡಾ. ಶ್ರೀರಾಮಭಟ್ಟ

101.ನನ್ನ ಬದುಕಿಗೆ ಅವರು ನೀಡಿದ ವಿಭಿನ್ನ ತಿರುವು : ಶ್ರೀಮತಿ ಗೀತಾ ದಾಸ್; ಅನು: ಡಾ. ಶ್ರೀರಾಮಭಟ್ಟ

102.ವಿಜ್ಞಾನ-ತಂತ್ರಜ್ಞಾನಗಳ ನಡುವಣ ಸೇತುಬಂಧ : ಶ್ರೀ ಎಂ.ಎಸ್. ವಲಿಯಾತನ್; ಅನು: ಡಾ. ಶ್ರೀರಾಮಭಟ್ಟ

103.ರೂಪಾಂತರಿಸುವ ದರ್ಶನ : ಶ್ರೀಮತಿ ಲಲಿತ ಸುಕುಮಾರನ್; ಅನು: ಡಾ. ಶ್ರೀರಾಮಭಟ್ಟ

104.ಬೋನು : ಶ್ರೀ ಜಿ. ಎಸ್. ಶ್ಯಾಮ್; ಅನು: ಜಿ. ಎನ್. ರಂಗನಾಥರಾವ್

105.ಅಯಾಚಿತ ಕೃಪೆ : ಶ್ರೀ ಭೋಗೀಲಾಲ್ ಪಟೇಲ್; ಅನು: ಜಿ. ಎನ್. ರಂಗನಾಥರಾವ್

106.ಒಬ್ಬ ಅಸಾಮಾನ್ಯ ಸನ್ಯಾಸಿ : ಸ್ರೀಮತಿ ಸರಸ್ವತೀ ಗೌರಿಶಂಕರ್; ಅನು: ಜಿ. ಎನ್. ರಂಗನಾಥರಾವ್

107.ವಿರಕ್ತ ಚೆಲುವ : ಶ್ರೀಮತಿ ಲಲಿತಾ ರಾಮದಾಸ್; ಅನು: ಜಿ. ಎನ್. ರಂಗನಾಥರಾವ್

108.ಪ್ರೀತಿಯ ಅಕ್ಷಯಪಾತ್ರೆ : ಶ್ರೀಮತಿ ಲೀಲಾ ರಾಮ್ಜೀ; ಅನು: ಜಿ. ಎನ್. ರಂಗನಾಥರಾವ್

109.ಸ್ವಾಮಿ ರಂಗನಾಥಾನಂದ - ನನ್ನ ನೆನವರಿಕೆಗಳು : ಶ್ರೀ ಪಿ. ಬಾಪಿ ರಾಜು; ಅನು: ಜಿ. ಎನ್. ರಂಗನಾಥರಾವ್

110.ಸರ್ವಸ್ವವೂ ಸಗುಣಾತ್ಮಕ : ಶ್ರೀಮತಿ ಭಾರತೀ ಸೇನ್; ಅನು: ಜಿ. ಎನ್. ರಂಗನಾಥರಾವ್

111.ಅವರ ವೈಯಕ್ತಿಕ ಚಿಂತನೆಗಳು ಮತ್ತು ಭಾವನೆಗಳು : ಶ್ರೀ ಇ. ಸುರೇಶ್ಕುಮಾರ್; ಅನು: ಜಿ. ಎನ್. ರಂಗನಾಥರಾವ್

112.ಡಲ್ಲಾಸ್ನಲ್ಲಿ ರಂಗನಾಥಾನಂದಜೀ : ಶ್ರೀ ಭೂಷಣ್ ಡಿ ಬಜಾಜ್; ಅನು: ಜಿ. ಎನ್. ರಂಗನಾಥರಾವ್

113.ಹೊಸ ಪ್ರಪಂಚದ ಪ್ರವಾದಿ : ಶ್ರೀಮತಿ ಸುಲಾಚನಾ ನಾಯರ್; ಅನು: ಜಿ. ಎನ್. ರಂಗನಾಥರಾವ್

114.ಅಪರಿಮಿತ ಅನುಗ್ರಹ : ಶ್ರೀಮತಿ ಇಳಾ ಬಸು; ಅನು: ಜಿ. ಎನ್. ರಂಗನಾಥರಾವ್

115.ನನ್ನ ಅನುಕರಣೀಯ ಆದರ್ಶ : ಶ್ರೀ ಎಂ. ಕೆ. ಸತ್ಯನಾರಾಯಣರಾಜು; ಅನು: ಜಿ. ಎನ್. ರಂಗನಾಥರಾವ್

116.ಮಾನವ ಧರ್ಮದ ಜೀವಂತ ಪ್ರತೀಕ : ಶ್ರೀ ಸುಬ್ರತ ಮೈತ್ರ; ಅನು: ಜಿ. ಎನ್. ರಂಗನಾಥರಾವ್

117.ಅತ್ಯುತ್ತಮ ಮಿತ್ರರೊಬ್ಬರ ಬಗೆಗಿನ ಯಾದೃಚ್ಛಿಕ ಚಿಂತನೆಗಳು : ಶ್ರೀಮತಿ ಗೀತಾ ಮೆಹ್ತಾ ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

118.ಸ್ವಾಮಿ ರಂಗನಾಥಾನಂದ : ಶ್ರೀ ಎನ್. ಕೃಷ್ಣಸ್ವಾಮಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

119.ಸ್ವಾಮಿ ರಂಗನಾಥಾನಂದರು : ಪ್ರಕಾಶದ ಒಂದು ಪುಂಜ : ಶ್ರೀಮತಿ ಪೂನಮ್ ಕೋಹ್ಲಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

120.ಒಂದು ಪ್ರಕಟಣೆಯ ಪ್ರಸಂಗ : ಶ್ರೀಮತಿ ಎಲ್ವಾ ಲಿನ್ನಿಯಾ ನೆಲ್ಸನ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ 121.ಆತ್ಮಸಂಯಮದ ಅತ್ಯದ್ಭುತ ಆಧ್ಯಾತ್ಮಿಕ ಶಕ್ತಿ : ಶ್ರೀ ಸ್ಟೀಫನ್ ಎಫ್ ವಾಕರ್ ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

122.ಅವರ ದೃಷ್ಟಿಯಲ್ಲಿ ಪ್ರತಿಯೊಬ್ಬನೂ ದೈವಿಕವಾಗಿದ್ದನು : ಶ್ರೀಮತಿ ಮಾಲಿನೀ ಮೆನನ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

123.ಶ್ರೀ ರಾಮಕೃಷ್ಣರ ಒಂದು ಪವಾಡ : ಶ್ರೀ ರಾಕೇಶ್ ಪುರಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

124.ಮೂರ್ತೀಭವಿಸಿದ ಮಾತೃರೂಪ : ಶ್ರೀ ಸುದೀನ್ ಚೌಧುರಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

125.ಶ್ರೇಷ್ಠ ಸನ್ಯಾಸಿ : ಶ್ರೀಮತಿ ಶಾಂತಿ ದೇವರಾಜ್ ಗುರುಮೂರ್ತಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

126.ಮಹಾರಾಜ್ ಅವರು ನನ್ನ ಸಂರ್ಪೂ ಜೀವನವನ್ನು ಪರಿವರ್ತಿಸಿದರು : ಶ್ರೀಮತಿ ಲೀಲಾ ಸಬರ್ವಾಲ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

127.ಸ್ಫೂರ್ತಿಯ ಸೆಲೆ : ಶ್ರೀ ಎಸ್. ರಾಮಮೋಹನ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

128.ಕೆಲವು ನೆನಪುಗಳು : ಶ್ರೀ ಸುಭಾಷ್ ಟಂಡನ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

129.ನನ್ನ ಜೀವನದಲ್ಲಿನ ಅತ್ಯಂತ ದೊಡ್ಡ ಪ್ರಭಾವ : ಶ್ರೀ ಮಹಾಲಿಂಗಮ್ ಚಿನ್ನತಂಬಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

130.ಸ್ವಾಮಿ ರಂಗನಾಥಾನಂದಜೀ: ಪಿತೃತ್ವದ ಮೂರ್ತ ಪ್ರತಿಮೆ : ಶ್ರೀಮತಿ ತ್ರಿವೇಣಿ ಪೋಪಟ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

131.ಆಂಧ್ರ ಪ್ರದೇಶದಲ್ಲಿ ಜಾಗೃತಿ : ಶ್ರೀ ನಾಗೇಶ್ವರ ರಾವ್; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

132.ಮಾನವನ ಶ್ರೇಷ್ಠತೆಯ ಸಮರ್ಥ ಹೋರಾಟಗಾರ : ಡಾ. ಪಿ. ಎಸ್. ಕೃಷ್ಣಮೂರ್ತಿ; ಅನು: ಶ್ರೀಮತಿ ಎಲ್. ವಿ. ಶಾಂತಕುಮಾರಿ

ಅನುಬಂಧ

133.ಮರೆಯಲಾಗದ ಕ್ಷಣಗಳು : ಸ್ವಾಮಿ ಸತ್ಯಪ್ರಭಾನಂದ; ಅನು: ವಿ. ಕೃಷ್ಣ

134.ಪ್ರಾಯೋಗಿಕ ವೇದಾಂತದ ಸರ್ವೋತ್ತಮ ಭಾಷ್ಯಕಾರ : ಶ್ರೀ ದೀಪಂಕರ್ ಮುಖ್ಯೋಪಾಧ್ಯಾಯ; ಅನು: ವಿ. ಕೃಷ್ಣ 135.ಆತ್ಮಸಂಯಮದ ಅತ್ಯದ್ಭುತ ಆಧ್ಯಾತ್ಮಿಕ ಶಕ್ತಿ : ಸ್ಟೀಫನ್ ಎಫ್. ವಾಕರ್; ಅನು: ವಿ. ಕೃಷ್ಣ

ಕೃತಜ್ಞತೆಗಳು:

ಶ್ರೀಮತ್ ಸ್ವಾಮಿ ರಂಗನಾಥಾನಂದ ಪ್ರಣತಿ

ಭಾಗ 5

ಚಿತ್ರ ಸಂಪುಟ

1.ಬ್ರಿಟನ್ನಿನ ಮಾಜಿ ಪ್ರಧಾನ ಮಂತ್ರಿ ಜೇಮ್ಸ್ ಕ್ಯಾಲಘನ್ ಅವರೊಡನೆ

2.ಶ್ರೀಮತಿ ಇಂದಿರಾಗಾಂಧಿ ಅವರೊಡನೆ

3.ಡಾ. ಎಸ್. ರಾಧಾಕೃಷ್ಣನ್ ಅವರೊಡನೆ

4.ಪಂಡಿತ್ ಜವಾಹರಲಾಲ್ ನೆಹರೂ ಅವರೊಡನೆ

5.ಕೆನ್ನೆತ್ ಗಾಲ್ಬ್ರೈತ್ ಅವರೊಡನೆ

6.ಚಿಲಿಯ ಸ್ಯಾಂಟಿಯಾಗೊ ಪೊಲೀಸ್ ಆಧಿಕಾರಿಗಳ ತರಬೇತಿ ಶಾಲೆಯಲ್ಲಿ ಸ್ವಾಮಿಗಳಿಗೆ ಸ್ವಾಗತ

7.ಮಹಾಮಾನ್ಯ ರಾಜ ಮಹೇಂದ್ರ ಮತ್ತು ಶ್ರೀಮನ್ ನಾರಾಯಣ್ (ಭಾರತದ ರಾಯಭಾರಿಗಳು) ಅವರೊಂದಿಗೆ

8.ಶ್ರೀಮತಿ ಸಿರಿಮಾವೋ ಬಂಡಾರ್ನಾಯಿಕೆ (ಶ್ರೀಲಂಕಾದ ಪ್ರಧಾನ ಮಂತ್ರಿಗಳು) ಅವರೊಂದಿಗೆ

9.ಡಾ. ರಾಜೇಂದ್ರ ಪ್ರಸಾದ್ (ಭಾರತದ ಪ್ರಥಮ ರಾಷ್ಟ್ರಪತಿ) ಅವರೊಂದಿಗೆ

10.ಶ್ರೀ ರಾಜೀವ್ ಗಾಂಧಿ ಅವರೊಂದಿಗೆ

11.ಶ್ರೀ ವೆಂಗಲರಾವ್ ಮತ್ತು ಶ್ರೀಮತಿ ಶಾರದಾ ಮುಖರ್ಜಿ ಅವರೊಂದಿಗೆ

12.ಶ್ರೀಮತಿ ಮತ್ತು ಶ್ರೀ ಪಿ. ಸಿ. ಅಲೆಕ್ಸಾಂಡರ್ ಅವರೊಂದಿಗೆ

13.ಶ್ರೀ ಎನ್. ಟಿ. ರಾಮರಾವ್ ಮತ್ತು ಶ್ರೀ ಸುಬ್ರಹ್ಮಣ್ಯಂ ಅವರೊಂದಿಗೆ

14.ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀ ಏಕನಾಥ್ ಜೀ ರಾನಡೆ ಅವರೊಂದಿಗೆ

15.ಶ್ರೀ ಶೇಕ್ ಫಾರೂಕ್ ಅಬ್ದುಲ್ಲಾ ಅವರೊಂದಿಗೆ

16.ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರೊಂದಿಗೆ

17.ಶ್ರೀ ಎಲ್. ಕೆ. ಅಡ್ವಾಣಿ ಅವರೊಂದಿಗೆ

18.ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರೊಂದಿಗೆ

19.ರಾಷ್ಟ್ರಪತಿ ಶ್ರೀ ಕೆ. ಆರ್. ನಾರಾಯಣನ್ ಅವರಿಂದ ಸ್ವಾಮೀಜಿ ಅವರು ಗಾಂಧಿ ಶಾಂತಿ ಪ್ರಶಸ್ತಿಯನ್ನು

ಸ್ವೀಕರಿಸುತ್ತಿರುವುದು.

20.ಡಾ. ಕರ್ಣಸಿಂಹ ಅವರೊಂದಿಗೆ

21.ಶ್ರೀ ಇ. ವಿ. ಚೆಲಿಶೇವ್ ಅವರೊಂದಿಗೆ

22.ಅಮೆರಿಕಾ ಸಂಯುಕ್ತ ಸಂಸ್ಥಾನದ ಹೂಸ್ಟನ್ನಲ್ಲಿ ಸ್ವಾಮೀಜಿ

23.ಆಸ್ಟ್ರೇಲಿಯಾದ ಲೌರಾದ ಗಣೇಶ ಆಶ್ರಮದಲ್ಲಿ ಭಕ್ತರೊಂದಿಗೆ

24.ಆಸ್ಟ್ರೇಲಿಯಾದಲ್ಲಿ

25.ಆಸ್ಟ್ರೇಲಿಯಾದಲ್ಲಿ (ಸ್ವಾಮಿ ರುದ್ರಾತ್ಮಾನಂದ ಅವರೊಡನೆ)

26.ಆಸ್ಟ್ರೇಲಿಯಾದ ಲೌರಾದ ಗಣೇಶ ಆಶ್ರಮದಲ್ಲಿ

27.ಸ್ವಾಮೀಜಿಯವರ ಡಚ್ ನಿವಾಸ, ಆರ್ಷೋವೆನ್ ಕುಟುಂಬದ ಮನೆ

28.ಹಾಲೆಂಡಿನಲ್ಲಿ ಭಕ್ತರೊಂದಿಗೆ

29.ಮಲೇಷ್ಯಾದಲ್ಲಿ

30.ಬಲ್ಗೇರಿಯಾದ ರಾಯಭಾರಿಯೊಂದಿಗೆ

31.ಪಶ್ಚಿಮ ಜರ್ಮನಿಯಲ್ಲಿ ಮುಲ್ಹೀಮ್ ವೇದಾಂತ ಅಧ್ಯಯನ ವಿಹಾರದ ಭಾಗಿಗಳೊಂದಿಗೆ

32.ಜಪಾನ್ನಲ್ಲಿ ಥೇರಜಾವಾ ಮತ್ತು ಅವರ ಕುಟುಂಬದೊಂದಿಗೆ- ಜೊತೆಗೆ ಇರುವವರು ಪ್ರೊ. ಹಿದೆನೋರಿ ಕಿತಗಾವಾ ಮತ್ತು ಪ್ರೊ. ಹೊಕ್ಕಯೋ

33.ಚಿಲಿಯ ಸ್ಯಾಂಟಿಯಾಗೋದಲ್ಲಿನ ಪೊಲೀಸ್ ಅಧಿಕಾರಿಗಳ ತರಬೇತಿ ಶಾಲೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಭಾಷಣಮಾಡುತ್ತಿರುವುದು.

34.ಜಾಂಬಿಯಾದಲ್ಲಿ ಜಾಂಬಿಯಾ ಸಂಪುಟದ ಸಚಿವರೊಂದಿಗೆ

35.ಕೊಲಂಬಿಯಾ ಜಿಲ್ಲೆಯ ವಾಷಿಂಗ್ಟನ್ನಿನಲ್ಲಿನ ಭಾರತೀಯ ದೂತಾವಾಸದಲ್ಲಿ - ಮೇಖಲಾ ಝಾ ಅವರು ಸ್ವಾಮೀಜಿ ಅವರನ್ನು ಪರಿಚಯಿಸಿ ಕೊಡುತ್ತಿರುವುದು.

36.ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುತ್ತಿರುವುದು - ಅವರ ಜೊತೆಯಲ್ಲಿ ಇರುವವರು (ಅಂದಿನ ಭಾರತೀಯ ರಾಯಭಾರಿ) ಶ್ರೀ ಕೆ. ಎಲ್. ಮೆಹ್ತಾ

ರಾಷ್ಟ್ರೀಯ ಸಮಗ್ರತೆಗಾಗಿ ನೀಡಲಾಗುವ 1985ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ನೀಡಿಕೆಯ ಸಂದರ್ಭದಲ್ಲಿ

ಸ್ವಾಮಿ ರಂಗನಾಥಾನಂದರಿಗೆ ಸಮರ್ಪಿಸಲಾದ ಸನ್ಮಾನ ಪತ್ರ

ಭಾಗ 1

ಇಂದಿರಾಗಾಂಧಿ ಪ್ರಶಸ್ತಿ ನೀಡಿಕೆ ಸನ್ಮಾನ ಪತ್ರ

ಸನ್ಮಾನ ಪತ್ರ

ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿಯನ್ನು ಸ್ಥಾಪಿಸಿರುವುದು ರಾಷ್ಟ್ರೀಯ ಭಾವೈಕ್ಯ ಹಾಗೂ ಸಕಾರಾತ್ಮಕ ಜಾತ್ಯತೀತತೆಯ ಆದರ್ಶಗಳನ್ನು ಘೋಷಿಸುವುದಕ್ಕಾಗಿ. ಈ ಆದರ್ಶಗಳನ್ನು ಅಶೋಕ, ಅಕ್ಬರ್ ಮೊದಲಾದ ಭಾರತದ ಮಹಾಪುತ್ರರು ಎತ್ತಿ ಹಿಡಿದಿದ್ದಾರೆ. ಈಚಿನ ದಿನಗಳಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರು ಇದನ್ನೇ ಮಾಡಿದ್ದಾರೆ. ಹೀಗೆ ಸ್ಥಾಪಿಸಲಾದ ಪ್ರಶಸ್ತಿಯನ್ನು ಮೊದಲನೆಯದಾಗಿ ಸ್ವಾಮಿ ರಂಗನಾಥಾನಂದರು, ಸೇವೆ ಸಮರ್ಪಣೆ ಪಾಂಡಿತ್ಯಗಳ ಸಾಕಾರಮೂರ್ತಿಯಾಗಿರುವವರು, ಪಡೆಯುತ್ತಿರುವುದು ನಮಗೆ ಸಂತಸವನ್ನು ತಂದಿದೆ. ಅವರು ರಾಷ್ಟ್ರೀಯ ಭಾವೈಕ್ಯದ ವಿಭಿನ್ನ ಮುಖಗಳ ಪ್ರಾತಿನಿಧಿಕ ರೂಪವಾಗಿದ್ದು, ವಿಶ್ವದಾದ್ಯಂತ ಹರಡಿರುವ ಮಾನವಕುಲವನ್ನು ಒಂದುಗೂಡಿಸುವ ಮಹತ್ಕಾರ್ಯವನ್ನು ಸಾಗರದಾಚೆಗೂ ಹೋಗಿ ಮಾಡುತ್ತಿದ್ದಾರೆ.

1908ರ ಡಿಸೆಂಬರ್ 15ರಂದು ಕೇರಳದ ತ್ರಿಕ್ಕೂರಿನಲ್ಲಿ ಜನಿಸಿದ ಸ್ವಾಮೀಜಿಯವರು ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ರಾಮಕೃಷ್ಣ ಮಹಾಸಂಘವನ್ನು ಸೇರಿ 1933ರಲ್ಲಿ ಸಂನ್ಯಾಸ ದೀಕ್ಷೆಯನ್ನು ಪಡೆದರು.

ತಮ್ಮ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪ್ರಪಂಚದ ಎಲ್ಲೆಡೆಗಳಲ್ಲೂ, ಬಯಸಿದ ಎಲ್ಲ ಬಗೆಯ ಜನರಿಗೂ - ಶ್ರೀಮಂತರು ಮತ್ತು ಬಡವರು, ಬೌದ್ಧಿಕರು ಮತ್ತು ಸರಳ ಮನಸ್ಕರು, ಪಟ್ಟಣ ಪ್ರದೇಶದವರು ಮತ್ತು ಹಳ್ಳಿಗರು - ನೀಡುವುದರೊಂದಿಗೆ ಮಾನವ ಸೇವೆಯ ಕ್ಷೇತ್ರದಲ್ಲಿ ಅವರು ಮಹತ್ಸಾಧನೆಯನ್ನು ಮಾಡಿದ್ದಾರೆ. 1943ರ ಬಂಗಾಳದ ಕ್ಷಾಮವಿರಬಹುದು, 1947ರ ಭಾರತ ವಿಭಜನೆಯ ನಂತರ ಜನಗಳು ಪಟ್ಟ ಕಷ್ಟವಿರಬಹುದು, ಅಥವಾ ದೇಶದ ನಾನಾ ಭಾಗಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡ ಪ್ರವಾಹಗಳಿರಬಹುದು, ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿಗಳನ್ನು ಸಂಘಟಿಸುವಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. ಶಿಕ್ಷಣ, ಸಾಮಾಜಿಕ ಜಾಗೃತಿ ಹಾಗೂ ಆಧ್ಯಾತ್ಮಿಕ ತಿಳಿವಳಿಕೆಗಳಿಗೆ ಸಂಬಂಧಿಸಿದಂತೆ ಅವರು ಸದಾ ದೇಶ ವಿದೇಶಗಳಲ್ಲಿ ಪ್ರವಾಸಗಳನ್ನು ಕೈಗೊಂಡು ತಮ್ಮ ಅದ್ಭುತ ಉಪನ್ಯಾಸಗಳ ಮೂಲಕ ವೇದಾಂತದ ಅಡಿಪಾಯವಾಗಿರುವ ಸಮನ್ವಯ ತತ್ತ್ವ, ಭಾರತದಲ್ಲಿ ಹಾಸುಹೊಕ್ಕಾಗಿರುವ ಪರಂಪರೆ-ಸಂಸ್ಕೃತಿಗಳು ಮತ್ತು ಮಾನವ ವ್ಯಾಪಾರಗಳಿಗೆ ಸಂಬಂಧಿಸಿದಂತೆ ವಿಜ್ಞಾನ-ತಂತ್ರಜ್ಞಾನಗಳ ಹೊಸ ಸಂದರ್ಭದಲ್ಲಿ ಅವುಗಳ ಪಾತ್ರ ಇವುಗಳ ಕುರಿತಾಗಿ ಜನರನ್ನು ಸ್ಫೂರ್ತಗೊಳಿಸುತ್ತಿದ್ದಾರೆ. ರಾಷ್ಟ್ರದ ಒಗ್ಗಟ್ಟು, ಏಕತೆ ಮತ್ತು ಅಖಂಡತೆಗಳಲ್ಲಿ ದೃಢ ವಿಶ್ವಾಸವನ್ನು ಹೊಂದಿರುವ ಸ್ವಾಮಿಜಿಯವರು ಅದರ ಆಧ್ಯಾತ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮುನ್ನಡೆಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ಪ್ರಸಾರ ಮಾಡುವುದರೊಂದಿಗೆ ರಾಷ್ಟ್ರೀಯ ಭಾವೈಕ್ಯಕ್ಕಾಗಿ ತಮ್ಮನ್ನು ದಣಿವರಿಯದಂತೆ ತೊಡಗಿಸಿಕೊಂಡಿದ್ದಾರೆ. 1966-67ರಷ್ಟು ಹಿಂದೆಯೇ ಮುಂಬೈನಲ್ಲಿ ಅವರು ರಾಷ್ಟ್ರೀಯ ಭಾವೈಕ್ಯದ ಸಂವಾದಗೋಷ್ಠಿಯನ್ನು ಏರ್ಪಡಿಸಿದ್ದರು. ಅವರು ತಮ್ಮ ಬರೆವಣಿಗೆಗಳ ಮೂಲಕ, ಉಪನ್ಯಾಸಗಳು ಮತ್ತು ಸೇವಾಕಾರ್ಯಗಳ ಮೂಲಕ ಎಲ್ಲ ಮಾನವ ಸಮುದಾಯಗಳ ನಡುವೆ ಸಾಮರಸ್ಯ, ಭ್ರಾತೃತ್ವ ಮತ್ತು ಏಕತೆಯನ್ನು ಉಂಟುಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯವರು ತಮ್ಮ ಲೇಖನಕಾರ್ಯದ ಜೊತೆಗೆ ಪಂಜಾಬ್ ಪ್ರಾಂತ್ಯದ ಉದ್ದಗಲಕ್ಕೂ ಸಂಚರಿಸಿ ಧರ್ಮ ಸಮನ್ವಯದ ಬಗೆಗೆ ಗುರುನಾನಕರ ಸಂದೇಶವನ್ನು ಪ್ರಸಾರ ಮಾಡುವುದರ ಮೂಲಕ ಭಾವೈಕ್ಯ ಸ್ಥಾಪನೆಗೆ ನೆರವಾಗಿದ್ದಾರೆ.

ಅನೇಕ ಪಾಂಡಿತ್ಯಪೂರ್ಣ ಬರವಣಿಗೆಗಳನ್ನು ಹೊರತಂದಿರುವ ಸ್ವಾಮೀಜಿಯವರ ಆಸಕ್ತಿ ಮತ್ತು ಕಾಳಜಿಗಳ ವಲಯ ಅತ್ಯಂತ ವಿಸ್ತಾರವಾದುದು. ಕೆಲವು ಶೀರ್ಷಿಕೆಗಳನ್ನು ಹೆಸರಿಸುವುದಾದರೆ: ನಾವು ಆರಾಧಿಸುವ ಕ್ರಿಸ್ತ, ಭಾರತೀಯ ಸಂಸ್ಕೃತಿಯ ಸಾರ, ಭಗವಾನ್ ಬುದ್ಧ ಮತ್ತು ನಮ್ಮ ಪರಂಪರೆ, ವೇದಾಂತ ಮತ್ತು ವಿಜ್ಞಾನ, ಭಾರತೀಯ ಸಮಾಜಕಾರ್ಯದ ತಾತ್ತ್ವಿಕತೆ, ಪರಿವರ್ತನಶೀಲ ಸಮಾಜಕ್ಕೆ ಶಾಶ್ವತ ಮೌಲ್ಯಗಳು (ನಾಲ್ಕು ಸಂಪುಟಗಳಲ್ಲಿ), ಯಾತ್ರಿಕನು ಕಂಡ ಜಗತ್ತು (ಎರಡು ಸಂಪುಟಗಳಲ್ಲಿ) ಮತ್ತು ಉಪನಿಷತ್ತುಗಳ ಸಂದೇಶ.

ಅವರ ಇತ್ತೀಚಿನ ಪ್ರಕಟಣೆಗಳು:

*ಸಾರ್ವಜನಿಕ ಆಡಳಿತದ ಸಾಮಾಜಿಕ ಜವಾಬ್ದಾರಿಗಳು

*ವಿಜ್ಞಾನ ಮತ್ತು ಧರ್ಮ

*ಮಾನವನ ಶಕ್ತಿ ಸಂಪನ್ಮೂಲಗಳ ವಿಜ್ಞಾನ

*ಸಮಗ್ರ ಮಾನವ ಅಭಿವೃದ್ಧಿಯ ರಾಜಕಾರಣ ಮತ್ತು ಆಡಳಿತ

*ವೇದಾಂತ ಮತ್ತು ಮಾನವತೆಯ ಭವಿಷ್ಯ.

ಶ್ರೀಮದ್ ಭಾಗವತವೂ ಸೇರಿದಂತೆ ಮೇಲಿನ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸ್ವಾಮಿಜಿಯವರ ಉಪನ್ಯಾಸಗಳ ಧ್ವನಿಮುದ್ರಿಕೆಗಳೂ ಲಭ್ಯವಿವೆ.

ಸ್ವಾಮಿ ರಂಗನಾಥಾನಂದಜಿಯವರಿಗೆ 1985ನೇ ಸಾಲಿನ ಇಂದಿರಾಗಾಂಧಿ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ರಾಷ್ಟ್ರೀಯ ಭಾವೈಕ್ಯದ ಸಾಧನೆಗಾಗಿ ರಾಷ್ಟ್ರಪ್ರೇಮ ಹಾಗೂ ಸಮರ್ಪಣಾಭಾವಗಳಿಂದ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿರುವುದರ ದ್ಯೋತಕವಾಗಿದೆ.*

ನವದೆಹಲಿ ಪಿ.ವಿ.ನರಸಿಂಹರಾವ್

31 ಅಕ್ಟೋಬರ್, 1986 ಅಧ್ಯಕ್ಷರು

ಸಲಹಾ ಮಂಡಲಿ

ಭಾಗ 2

ರಾಮಕೃಷ್ಣ ಮಠದ ಸಂನ್ಯಾಸಿಗಳ ದೃಷ್ಟಿಯಲ್ಲಿ

1.ಅಸಾಧಾರಣ ಆಧ್ಯಾತ್ಮಿಕ ಶಕ್ತಿ

-ಸ್ವಾಮಿ ಆತ್ಮಸ್ಥಾನಂದ*

ಯುಗಾವತಾರನೊಬ್ಬನು ಬರುವಾಗ ಅವನು ತನ್ನೊಂದಿಗೆ ತನ್ನ ಪರಿವಾರವನ್ನೂ ಕರೆತಂದು ಜನರಿಗೆ ತನ್ನ ಆಗಮನದ ಉದ್ದೇಶ, ತನ್ನ ಸಾಧನೆ-ತಪಶ್ಚರ್ಯೆಗಳ ಅರ್ಥವನ್ನು ಮನಗಾಣಿಸುತ್ತಾನೆ. ಶ್ರೀರಾಮಕೃಷ್ಣರು ತಮ್ಮ ಲೀಲಾನಾಟಕದಲ್ಲಿ ಸಹಕರಿಸಲು ಕೆಲವು ಸಮೀಪವರ್ತಿಗಳನ್ನು ಹೊಂದಿದ್ದರೆಂಬುದು ನಮಗೆ ತಿಳಿದಿದೆ. ಆದರೆ ಅವರ ನಿರ್ಗಮನದ ಬಳಿಕ ಅವರ ಆಧ್ಯಾತ್ಮಿಕ ಸಂದೇಶದ ಪ್ರಸಾರ ನಿಲ್ಲುವಂತಿಲ್ಲ. ಅದು ಮುಂದುವರಿಯಲೇಬೇಕು. ಅಲ್ಲದೆ ಶ್ರೀ ರಾಮಕೃಷ್ಣರ ಸಂದೇಶ ಪ್ರಸಾರಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಸಮರ್ಥ ಉತ್ತರಾಧಿಕಾರಿಗಳು ಬೇಕು. ನಮ್ಮ ಪೂಜ್ಯ ರಂಗನಾಥಾನಂದಜಿ ಮಹಾರಾಜರು ಅಂತಹ ಸಮರ್ಥ ಉತ್ತರಾಧಿಕಾರಿಗಳಲ್ಲೊಬ್ಬರು ಎಂದು ನನ್ನ ನಂಬಿಕೆ.

ಅವರಿಗೆ ಬಾಲ್ಯದಲ್ಲಿ ಒಳ್ಳೆಯ ವಿದ್ಯಾಭ್ಯಾಸವಿರಲಿಲ್ಲ; ಅಥವಾ ಮುಂದೆ ಡಾಕ್ಟರೇಟ್ ಮಾಡಿ ಪಾಂಡಿತ್ಯದ ವಿಶೇಷ ಪದವಿಗಳನ್ನು ಗಳಿಸಲೂ ಇಲ್ಲ. ಹಾಗೆ ನೋಡಿದರೆ ಅವರು ಪಡೆದ ಔಪಚಾರಿಕ ಶಿಕ್ಷಣ ಬಹಳ ಕಡಮೆ. ಅವರೊಂದು ಕಾಲೇಜಿನಲ್ಲೊ ವಿಶ್ವವಿದ್ಯಾಲಯದಲ್ಲೊ ಎಂದೂ ಓದಲಿಲ್ಲ. ಆದರೆ ಅವರ ಶಾಸ್ತ್ರ ಜ್ಞಾನವನ್ನು ನೋಡಿ! ಅವರು ಅಷ್ಟೊಂದು ಶಾಸ್ತ್ರಗ್ರಂಥಗಳನ್ನು, ಬೇರೆ ಬೇರೆ ಭಾಷೆಗಳನ್ನು ಹೇಗೆ ಕಲಿತರೆನ್ನುವುದು, ಬೇರೆ ಬೇರೆ ತತ್ತ್ವಶಾಸ್ತ್ರಗಳು-ವೇದ ವೇದಾಂತಗಳು-ಗೀತೆ-ಭಾಗವತ-ರಾಮಾಯಣ-ಮಹಾಭಾರತ-ಪುರಾಣಗಳು- ತಂತ್ರಗಳು- ಇವೆಲ್ಲದರ ಗಾಢವಾದ, ಘನವಾದ ಚಿಂತನೆಗಳನ್ನು ಹೇಗೆ ಅರಗಿಸಿಕೊಂಡು ಪ್ರಪಂಚದಾದ್ಯಂತ ಪ್ರಸಾರ ಮಾಡಿದರೆನ್ನುವುದು ನಿಜಕ್ಕೂ ಆಶ್ಚರ್ಯವನ್ನುಂಟುಮಾಡುತ್ತದೆ. ಶ್ರೀರಾಮಕೃಷ್ಣ- ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರ ಜೀವನಗಳ ಅರ್ಥ ಹಾಗೂ ಪರಿಣಾಮಗಳ ಬಗ್ಗೆ ಅವರಿಗಿದ್ದ ಗಹನವಾದ ತಿಳಿವಳಿಕೆ ಕೇವಲ ಅದ್ಭುತವೇ ಸರಿ!

ನಾನು ಹೇಳುವುದರಲ್ಲಿ ತಪ್ಪಿದ್ದರೆ ಕ್ಷಮಿಸಿ- ಸ್ವಾಮಿ ವಿವೇಕಾನಂದರ ಬಳಿಕ ಭಾರತದ ಆಧ್ಯಾತ್ಮಿಕ ಚಿಂತನೆಯನ್ನು ಜಗತ್ತಿನಲ್ಲಿ ಸ್ವಾಮಿ ರಂಗನಾಥಾನಂದಜಿ ಮಹಾರಾಜರಂತೆ ಹರಡಿದವರು ಯಾರೂ ಇಲ್ಲ ಎಂದು ನನ್ನ ತಿಳಿವಳಿಕೆ. ಇದ್ದರೆ ನನಗಂತೂ ಗೊತ್ತಿಲ್ಲ. ಬೇರೆಬೇರೆ ಪಂಥಗಳಿಗೆ ಸೇರಿದ ಸಂನ್ಯಾಸಿಗಳು ಮತ್ತು ಭಕ್ತರಿದ್ದಾರೆ; ಎಷ್ಟೋ ಜನ ವಾಗ್ಮಿಗಳಿದ್ದಾರೆ; ನಮ್ಮ ದೇಶದಲ್ಲೂ ವಿದೇಶಗಳಲ್ಲೂ ಎಷ್ಟೋ ಧಾರ್ಮಿಕ ಸಂಘಸಂಸ್ಥೆಗಳಿವೆ. ಸ್ವಾಮಿ ವಿವೇಕಾನಂದರ ಬಳಿಕ ಅವರ ಸಂನ್ಯಾಸಿಸಹೋದರರೇ ಬಹುಕಾಲ ವಿದೇಶದಲ್ಲಿದ್ದುಕೊಂಡು ಬಹಳಷ್ಟು ಕೆಲಸ ಮಾಡಿದರೆನ್ನುವುದೂ ನಿಜವೆ. ಆದರೆ ಶ್ರೀರಾಮಕೃಷ್ಣರು ಸ್ವಾಮಿ ರಂಗನಾಥಾನಂದರಿಗೆ ಮಹಾರಾಜರ ಮೂಲಕ ಕೆಲಸ ಮಾಡಿಸಿಕೊಂಡ ರೀತಿಯನ್ನು ಭಗವಂತನ ಪವಾಡವೆಂದೇ ಹೇಳಬೇಕು! ಅದು ಆಶ್ಚರ್ಯ, ಪರಮಾಶ್ಚರ್ಯ!

ನನಗೊಂದು ಅದ್ಭುತವಾದ ಘಟನೆ ನೆನಪಾಗುತ್ತದೆ. ಪರಮಪೂಜ್ಯ ಭೂತೇಶಾ ನಂದಜಿ ಮಹಾರಾಜರು ಮತ್ತು ಪರಮಪೂಜ್ಯ ರಂಗನಾಥಾನಂದಜಿ ಮಹಾರಾಜರು ಇಬ್ಬರಿಗೂ ತೀವ್ರ ಅನಾರೋಗ್ಯ. ಇಬ್ಬರೂ ಆಸ್ಪತ್ರೆಯಲ್ಲಿದ್ದರು. ಸ್ವಾಮಿ ಭೂತೇಶಾ ನಂದರು ಒಂದು ಕೋಣೆಯಲ್ಲಿ; ಸ್ವಾಮಿ ರಂಗನಾಥಾನಂದರು ಇನ್ನೊಂದರಲ್ಲಿ.

* ಅಧ್ಯಕ್ಷರು, ರಾಮಕೃಷ್ಣ ಮಠ ಮತ್ತು ಮಿಷನ್

__________

ಇಬ್ಬರ ಪರಿಸ್ಥಿತಿಯೂ ಗಂಭೀರ. ಕೊನೆಗೆ ಆಗ ಸಂಘದ ಅಧ್ಯಕ್ಷರಾಗಿದ್ದ ಸ್ವಾಮಿ ಭೂತೇಶಾನಂದರು ತೀರಿಕೊಂಡರು. ಕೆಲವು ದಿನಗಳ ಬಳಿಕ ನಾವು ಬೇಲೂರು ಮಠದಲ್ಲಿ ಸಭೆಗಳನ್ನು ನಡೆಸಿ ಸ್ವಾಮಿ ರಂಗನಾಥಾನಂದಜಿ ಮಹಾರಾಜರು ಸಂಘದ ನೂತನ ಅಧ್ಯಕ್ಷರಾಗಬೇಕೆಂದು (`ಸಂಘಗುರು') ತೀರ್ಮಾನಿಸಿದೆವು. ಈ ಆಯ್ಕೆಯ ಬಳಿಕ ನಾವು ಅವರನ್ನು ನೋಡಲು ಆಸ್ಪತ್ರೆಗೆ ಹೋದೆವು. ನಾವು ಅವರಿಗೆ ಹಾರವನ್ನು ಹಾಕಿ ಈ ಸಂತೋಷದ ಸುದ್ದಿಯನ್ನು ಹೇಳಿದಾಗ ಅವರೆಂದರು: ``ಶ್ರೀ ರಾಮಕೃಷ್ಣರ ಅದ್ಭುತ ಲೀಲೆಯನ್ನು ನೋಡಿ! ಮೈಸೂರು ಆಶ್ರಮದಲ್ಲಿ ಅಡುಗೆ ಮಾಡುತ್ತಿದ್ದಾಗ ಇಂದು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಅಧ್ಯಕ್ಷ!''

ಅವರು ಹೀಗೆ ಹೇಳಿದ್ದೇಕೆಂದರೆ ಮೈಸೂರು ಆಶ್ರಮದಲ್ಲಿ ಅವರು ಅಡುಗೆ ಕೆಲಸ ಮಾಡುತ್ತಿದ್ದರು. ಅವರು ಅವೆಲ್ಲದರ ನಡುವೆ ಅಧ್ಯಯನ ಮಾಡಿ ನಿಧಾನವಾಗಿ ಮುಂದೆಬಂದರು. ಅಲ್ಲದೆ, ಅವರು ಅಂತಿಮವಾಗಿ ಏನಾದರೆಂಬುದನ್ನು ನಾವೆಲ್ಲ ಕಂಡಿದ್ದೇವೆ. ಅವರು ಅಷ್ಟೊಂದನ್ನೆಲ್ಲ ಹೇಗೆ ಓದಿದರು, ಆ ವಿಚಾರಗಳನ್ನೆಲ್ಲ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಹೇಗೆ ವಿವರಿಸುತ್ತಿದ್ದರು ಎನ್ನುವುದು ನಿಜಕ್ಕೂ ಆಶ್ಚರ್ಯಕರ.

ಅವರು ಎಲ್ಲೇ ಹೋದರೂ ಮೊದಮೊದಲು ಅವರ ಉಪನ್ಯಾಸಗಳಿಗೆ ಹೆಚ್ಚು ಜನ ಸೇರುತ್ತಿರಲಿಲ್ಲ. ಆದರೆ, ಒಂದೆರಡು ಉಪನ್ಯಾಸಗಳಾದ ಮೇಲೆ, ಸುದ್ದಿ ಹರಡಿ ಜನರ ದಂಡೇ ಬಂದು ಸೇರುತ್ತಿತ್ತು. ದೆಹಲಿಯಲ್ಲಿ ಅವರ ಉಪನ್ಯಾಸಗಳು ನಡೆಯುತ್ತಿದ್ದುದು ಶಾಮಿಯಾನದಲ್ಲೇ ಹೊರತು ಹಜಾರವೊಂದರಲ್ಲಿ ಅಲ್ಲ. ಅವರ ವಾರದ ಉಪನ್ಯಾಸಗಳಿಗೆ ಎಷ್ಟೊಂದು ಜನ ಸೇರುತ್ತಿದ್ದರೆಂದರೆ ದೇವಾಲಯದ ನೆಲಅಂತಸ್ತು ಕೂಡ ಸಾಲುತ್ತಿರಲಿಲ್ಲ. ಆದ್ದರಿಂದಲೇ ಹೊರಗೆ ಒಂದು ಶಾಮಿಯಾನ ಹಾಕಬೇಕಾಗಿ ಬರುತ್ತಿತ್ತು. ಇಂಥದೆಲ್ಲ ಸಾಧ್ಯವಾದದ್ದು ಹೇಗೆ? ಇದಕ್ಕೆ ಉತ್ತರ ಇಷ್ಟೆ: ಅವರು ಮಾಡುತ್ತಿದ್ದುದು ಭಗವಂತನ ಕೆಲಸ; ಆ ಕೆಲಸಕ್ಕೆ ಬೇಕಾದ ವ್ಯವಸ್ಥೆಯನ್ನೆಲ್ಲ ಸ್ವಯಂ ಭಗವಂತನೇ ಮಾಡಿಕೊಡುತ್ತಾನೆ.

ಸ್ವಾಮಿ ರಂಗನಾಥಾನಂದರದು ಅತ್ಯಂತ ಶಿಸ್ತಿನ ಜೀವನ. ರಾಮಕೃಷ್ಣ ಮಠ ಮತ್ತು ಮಿಷನ್ ರಾಮಕೃಷ್ಣ ವಿವೇಕಾನಂದರ ಯಾವ ಆದರ್ಶಗಳ ಮೇಲೆ ನಡೆದು ಕೊಂಡು ಹೋಗುತ್ತಿದೆಯೋ ಅವುಗಳನ್ನು ಅವರು ಚಾಚೂತಪ್ಪದಂತೆ ಪಾಲಿಸುತ್ತಿದ್ದರು. ಆದರೆ, ಇದೆಲ್ಲದರ ಜೊತೆಗೆ ಸಮಯ ಹಾಗೂ ಸನ್ನಿವೇಶಗಳಿಗೆ ಅಗತ್ಯವಾದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದರು. ಇದಕ್ಕೊಂದು ದೊಡ್ಡ ನಿದರ್ಶನ ವೆಂದರೆ ಹೈದರಾಬಾದ್ ಆಶ್ರಮ. ಅಲ್ಲಿ ಅವರು ಏನನ್ನು ತಾನೇ ಸಾಧಿಸಿಲ್ಲ! ಮೊದಲು ಆ ಜಾಗದಲ್ಲಿ ಏನೇನೂ ಇರಲಿಲ್ಲ. ಆದರೆ, ಆಮೇಲೆ ಅವರೇನು ಮಾಡಿದರು ನೋಡಿ! ಇದು ಅವರಿಗೆ ಹೇಗೆ ಸಾಧ್ಯವಾಯಿತು? ನಿಜಕ್ಕೂ ಅವರು ಅಲ್ಲಿ ಎಂತಹ ಅದ್ಭುತಗಳನ್ನು ಸಾಧಿಸಿದರು! ಪರಮಾಶ್ಚರ್ಯ! ಭಗವಂತ ಅವರಿಗೆ ಶಕ್ತಿಯನ್ನು ಕೊಟ್ಟಿದ್ದ. ಆ ಶಕ್ತಿ ಕ್ರಮೇಣ ಅವರಲ್ಲಿ ವ್ಯಕ್ತವಾಗುತ್ತಿತ್ತು.

ಪೂಜ್ಯ ರಂಗನಾಥಾನಂದಜಿಯವರು ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುತ್ತಿದ್ದರು. ಸಂನ್ಯಾಸಿಗಳಾಗಲಿ, ಬ್ರಹ್ಮಚಾರಿಗಳಾಗಲಿ, ಭಕ್ತರಾಗಲಿ ಪ್ರತಿಯೊಬ್ಬರನ್ನೂ ಮುನ್ನಡೆಯುವಂತೆ ಹುರಿದುಂಬಿಸುತ್ತಿದ್ದರು. ಹಾಗೆ ನೋಡಿದರೆ ಇದು ಎಲ್ಲ ಸಂತರಲ್ಲೂ ಕಂಡುಬರುವ ಒಂದು ಅನನ್ಯವಾದ ಗುಣ. ಇದರ ಪರಿಣಾ�